ಬೆಂಗಳೂರು: ಇತ್ತೀಚೆಗೆ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹ ಸಚಿವರು ಹೇಳಿರುವುದು ಸರಿಯಾಗಿದೆ. ಉರ್ದುವಿನಲ್ಲಿ ಮಾತನಾಡದ ಕಾರಣ ಚಂದ್ರುವಿನ ಹತ್ಯೆ ಮಾಡಲಾಗಿದೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಂದ್ರು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಮರು. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆಂದು ಚಂದ್ರುವಿನ ಸ್ನೇಹಿತ ಹೇಳಿದ್ದಾರೆ. ಬೈಕ್ ಗೆ ಆ್ಯಕ್ಸಿಂಡೆಂಟ್ ಆಗಿದ್ದು ನಿಜ, ಆಗ ಉರ್ದುವಿನಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಉರ್ದು ಬರುವುದಿಲ್ಲ ಎಂದು ಚಂದ್ರು ಹೇಳಿದಾಗ ಚುಚ್ಚಿ ಕೊಲೆ ಮಾಡಿದ್ದಾರೆ ಎಂದರು.
ಈ ವಿಚಾರದಲ್ಲಿ ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು. ಗೃಹ ಸಚಿವರು ಹೇಳಿರುವುದು ಸತ್ಯ. ಇದರ ಬಗ್ಗೆ ತನಿಖೆ ನಡೆಯಲಿ. ಚಂದ್ರು ಸ್ನೇಹಿತ ಸೈಮನ್ ಹೇಳಿರುವುದು ಸತ್ಯ. ಘಟನೆ ನಡೆದಾಗ ಜಾಗದಲ್ಲಿ ಸ್ಥಳೀಯರರು, ಸೈಮನ್ ಇದ್ದರು. ಚಂದ್ರುಗೆ ಚುಚ್ಚಿರುವುದನ್ನು ಸೈಮನ್ ನೋಡಿದ್ದಾನೆ. ಅವರ ತಾಯಿ, ಚಿಕ್ಕಮ್ಮ ಎಲ್ಲಾ ನಿಜ ಹೇಳಿದ್ದಾರೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂದು ರವಿ ಕುಮಾರ್ ಆರೋಪಿಸಿದರು.
ಇದನ್ನೂ ಓದಿ:ಶ್ರೀಕೃಷ್ಣದೇವರಾಯ ವಿವಿ ಎಡವಟ್ಟು: ಶೇ. 30 ರಷ್ಟು ಬಿಎಸ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಮುಸ್ಲಿಂ ಆಟೋಗಳನ್ನು ಬಳಸಬಾರದು ಎಂದು ಹಿಂದು ರಕ್ಷಣಾ ವೇದಿಕೆ ಅಭಿಯಾನ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರವಿ ಕುಮಾರ್, ಇದು ಕ್ಷುಲ್ಲಕ ಕಾರಣ. ಆಟೋ ಬಳಸಬಾರದು, ಮಾವಿನ ಹಣ್ಣು ಖರೀದಿ ಮಾಡಬಾರದು ಎಂಬ ವಿಚಾರಗಳನ್ನು ಇಲ್ಲಿ ತರಬಾರದು. ಇದರಲ್ಲಿ ಹಿಂದೂ ಮುಸ್ಲಿಂ ಎಂದು ಇರಬಾರದು. ಯಾವ ಆಟೋ ಮೊದಲು ಬರುತ್ತದೋ ಆ ಆಟೋವನ್ನು ಜನರು ಬಳಸುತ್ತಾರೆ ಎಂದರು.