Advertisement

ಪೊಲೀಸ್‌ ಬೀಟ್‌ ವ್ಯವಸ್ಥೆಯಲ್ಲಿ ಸುಧಾರಣೆ: ಡಾ|ಪರಮೇಶ್ವರ್‌

03:45 AM Jan 13, 2017 | Team Udayavani |

ಮಂಗಳೂರು: ಕಾನೂನು ಸುವ್ಯವಸ್ಥೆಯನ್ನು ಸಮರ್ಪಕವಾಗಿ ಪಾಲಿಸಿಕೊಂಡು ಬರುವನಿಟ್ಟಿನಲ್ಲಿ  ಪೊಲೀಸ್‌ ಬೀಟ್‌ ವ್ಯವಸ್ಥೆ ಸುಧಾರಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ಅವರು ಗುರುವಾರ ಇಲ್ಲಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ಗೆ ಸರಕಾರ ಒದಗಿಸಿದ 25 ಹೊಸ ಗಸ್ತು ವಾಹನಗಳಿಗೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು.

ಹೊಸ ವ್ಯವಸ್ಥೆಯಂತೆ ಪೊಲೀಸ್‌ ಬೀಟ್‌ಗೆ ಇಬ್ಬರು ಕಾನ್ಸ್‌ಟೆಬಲ್‌ಗ‌ಳನ್ನು ನೇಮಕ ಮಾಡಲಾಗುತ್ತಿದ್ದು, ಅವರು ತಮ್ಮ ಬೀಟ್‌ ವ್ಯಾಪ್ತಿಯ ಪ್ರದೇಶ ಮತ್ತು ಪ್ರತೀ ಮನೆಗಳ ಮತ್ತು ಜನರ ಪರಿಚಯ ಹೊಂದಿರ ಬೇಕು. ಜನಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ಸಾಹಿತಿ, ಕಲಾವಿದರು ಮುಂತಾದವರು ಇದ್ದರೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕಾಗು ತ್ತದೆ. ಇದು ಬೀಟ್‌ ವ್ಯವಸ್ಥೆಯನ್ನು ಪರಿಣಾಮಕಾರಿ ಯಾಗಿಸುವುದರ ಒಂದು ಭಾಗವಾಗಿದೆ ಎಂದರು.

ಕಲಬುರಗಿ ಹತ್ಯೆ ಪ್ರಕರಣ: ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣವನ್ನು ಭೇದಿಸಲು ಇದುವರೆಗೆ ಸಾಧ್ಯವಾಗಿಲ್ಲ. ಇತಿಹಾಸದಲ್ಲಿ ಇದುವರೆಗೆ ನಡೆಯದಷ್ಟು  ಪ್ರಯತ್ನವನ್ನು ಈ ದಿಶೆಯಲ್ಲಿ ನಡೆಸಲಾಗಿದೆ. ಇದನ್ನು ಗಮನಿಸಿ ಬೀಟ್‌ ವ್ಯವಸ್ಥೆ ಸುಧಾರಿಸಲು ತೀರ್ಮಾನಿಸಲಾಗಿದೆ ಎಂದರು.

ಸಿಬಂದಿ ನೇಮಕ: ರಾಜ್ಯದಲ್ಲಿ 25,000 ಪೊಲೀಸ್‌ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 21,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 16,000 ಮಂದಿಯ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅವರಲ್ಲಿ ಶೇ. 75ರಷ್ಟು ಮಂದಿ ತರಬೇತಿ ಮುಗಿಸಿ ಸೇವೆಗೆ ಸೇರ್ಪಡೆಗೊಂಡಿದ್ದಾರೆ. 

Advertisement

ಮತ್ತೆ 8,000 ಮಂದಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವರ್ಷಕ್ಕೆ 3,000 ಮಂದಿ ಪೊಲೀಸರು ನಿವೃತ್ತಿ ಹೊಂದುತ್ತಿದ್ದು, ಮುಂದಿನ 3 ವರ್ಷಗಳಲ್ಲಿ ಆವಶ್ಯಕತೆಗೆ ತಕ್ಕಂತೆ ನೇಮಕಾತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಹಣಕಾಸು ಇಲಾಖೆಯ ಅನುಮೋದನೆಯನ್ನು ಪಡೆಯಲಾಗಿದೆ. 1,000 ಪಿಎಸ್‌ಐ ಹುದ್ದೆಗೆ ಲಿಖೀತ ಪರೀಕ್ಷೆ  ನಡೆಸಲಾಗಿದ್ದು, ಈ ಪೈಕಿ 225 ಮಂದಿ ತರಬೇತಿ ಪಡೆದು ನೇಮಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಿಬಂದಿ ಖಾಲಿ ಇರ ಬಾರದೆಂದು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಪೊಲೀಸರ ಭಡ್ತಿ, ವೇತನ ಪರಿಷ್ಕರಣೆ, ಭತ್ತೆ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. 2017 ಜನವರಿ 1ರಂದು 11,212 ಮಂದಿ ಪೊಲೀಸ್‌ ಕಾನ್ಸ್‌ ಟೆಬಲ್‌ ಮತ್ತು ಹೆಡ್‌ಕಾನ್ಸ್‌ಟೆಬಲ್‌ಗ‌ಳಿಗೆ ಭಡ್ತಿ ನೀಡಲಾಗಿದೆ. ಭಡ್ತಿಯ ಅರ್ಹತೆಯನ್ನು  22 ವರ್ಷಗಳಿಂದ  10 ವರ್ಷಕ್ಕೆ ಇಳಿಸಲಾಗಿದೆ. ಅದರನ್ವಯ ಎಲ್ಲರಿಗೂ ಕನಿಷ್ಠ  ಎಎಸ್‌ಐ ಆಗುವ ಅವಕಾಶ ಲಭಿಸುತ್ತದೆ.  ಶಾಸಕ ರಾಜು ಕಾಗೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಎಫ್‌ಐಆರ್‌ ದಾಖಲಾಗಿದೆ  ಎಂದರು.

ಶಾಸಕರಾದ ಜೆ.ಆರ್‌. ಲೋಬೊ ಮತ್ತು ಬಿ.ಎ. ಮೊದಿನ್‌ ಬಾವಾ, ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌, ಪಶ್ಚಿಮ ವಲಯದ ಐಜಿಪಿ ಹರಿಶೇಖರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next