Advertisement

ಪೊಲೀಸ್‌ ದಾಳಿ:ತಪ್ಪಿಸಿಕೊಳ್ಳುವಾಗ ಸೆಕ್ಸ್‌ ವರ್ಕರ್ಸ್‌ಗಳಿಬ್ಬರ ಸಾವು

03:20 PM Apr 12, 2018 | |

ಮುಂಬಯಿ: ಪೊಲೀಸ್‌ ದಾಳಿಯ ವೇಳೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಈರ್ವರು ಲೈಂಗಿಕ ಕಾರ್ಯಕರ್ತೆಯರು ಕಟ್ಟಡವೊಂದರ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆಯು ದಕ್ಷಿಣ ಮುಂಬಯಿಯ ಗ್ರ್ಯಾಂಟ್‌ ರೋಡ್‌ ಪ್ರದೇಶದಲ್ಲಿ ಸಂಭವಿಸಿದೆ.

Advertisement

 ಮಂಗಳವಾರ ರಾತ್ರಿ 10.30ರ ಸುಮಾರಿಗೆ ಡಿ.ಬಿ. ಮಾರ್ಗ ಪ್ರದೇಶದಲ್ಲಿರುವ ಓಂ ಬಿಲ್ಡಿಂಗ್‌ನಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಹವ್ಯಾಪಾರ ದಂಧೆಗೆ ಹೆಸರಾಗಿರುವ ಆ ಪ್ರದೇಶದಲ್ಲಿ ಡಿ.ಬಿ. ಮಾರ್ಗ ಪೊಲೀಸ್‌ ಠಾಣೆಯ ತಂಡವೊಂದು ಗಸ್ತು ತಿರುಗುತ್ತಿತ್ತು. ಪೊಲೀಸರು ಕಟ್ಟಡದ ತಪಾಸಣೆಗೆಂದು ತೆರಳಿದಾಗ, ತಳಮಹಡಿಯಲ್ಲಿದ್ದ ವ್ಯಕ್ತಿಯೋರ್ವ ಇತರರನ್ನು ಎಚ್ಚರಿಸಿದ. ಇದರಿಂದ ಕಟ್ಟಡದ ಮೇಲ್ಮಹಡಿಯಲ್ಲಿದ್ದ ಲೈಂಗಿಕ ಕಾರ್ಯಕರ್ತರು ಗಾಬರಿಗೊಳ್ಳುವಂತೆ ಮಾಡಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಈ ವೇಳೆ ಅವರಲ್ಲಿ ಈರ್ವರು ಮಹಿಳೆಯರು ಮೂರನೇ ಮಹಡಿಯ ಕಿಟಕಿಯಿಂದ ಹಗ್ಗದ ಸಹಾಯದಲ್ಲಿ ಇಳಿಯಲು ಯತ್ನಿಸಿದಾಗ ಕೈ ಜಾರಿ ಕೆಳಕ್ಕೆ ಬಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು  ಪೊಲೀಸರು ಕೂಡಲೇ ಬೈಕುಲಾದಲ್ಲಿರುವ ಸರಕಾರಿ ಸಂಚಾಲಿತ ಜೆ. ಜೆ. ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಈರ್ವರೂ ಮೃತಪಟ್ಟರು ಎಂದು ಅಧಿಕಾರಿ ಹೇಳಿದ್ದಾರೆ.

 ಮೃತ ಮಹಿಳೆಯರ ಪೈಕಿ ಇಬ್ಬರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಡಿ.ಬಿ.ಮಾರ್ಗ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next