ಹಾಸನ: ರೀಲ್ಸ್‌ಗಾಗಿ ನಕಲಿ ಗನ್ ಹಿಡಿದು ಬುಲೆಟ್ ಬೈಕಿನಲ್ಲಿ ಓಡಾಡಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವಕರು ಗನ್ ಹಿಡಿದು ಮನಬಂದಂತೆ ಆರ್.ಸಿ.ರಸ್ತೆ, 80 ಅಡಿ ರಸ್ತೆ, ರಿಂಗ್ ರಸ್ತೆಯಲ್ಲಿ ಬುಲೆಟ್ ಬೈಕ್ ಹಾಡುಹಗಲೇ ಗನ್ ಹಿಡಿದು ರಸ್ತೆಯಲ್ಲೆಲ್ಲಾ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಬ್ಬರು ಯುವಕರು ಬೈಕಿನಲ್ಲಿ ಓಡಾಡುತ್ತಿದ್ದು, ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಕೈಯಲ್ಲಿ ಗನ್ ಇತ್ತು. ರೀಲ್ಸ್‌ಗಾಗಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.
ಅತಿರೇಕದ ವರ್ತನೆಗೆ ಕ್ರಮ: ಹಾಸನ ನಗರದಲ್ಲಿ ಹೆಚ್ಚುತ್ತಿರುವ ವೀಲ್ಹಿಂಗ್ ಪುಂಡರ ಹಾವಳಿ ಹೆಚ್ಚುತ್ತಿರುವ ನಡುವೆಯೇ ಜನನಿಬಿಡ ಪ್ರದೇಶದಲ್ಲಿ ಗನ್ ಹಿಡಿದು ಅತಿರೇಕದ ವರ್ತನೆ ತೋರಿರುವ ಯುವಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾರ್ವಜನಿಕರು ಅನಾಹುತ ಗಳು ಸಂಭವಿಸುವ ಮುನ್ನ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಬೈಕಿನಲ್ಲಿ ನಕಲಿ ಗನ್ ಹಿಡಿದು ರೀಲ್ಸ್‌ಗಾಗಿ ಓಡಾಡಿದ ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ಬೆಳಕಿಗೆ ಬರುತ್ತಿದ್ದಂತೆಯೇ ಮಾಜಿ ಶಾಸಕ ಪ್ರೀತಂಗೌಡರ ಬೆಂಬಲಿಗರು ಶಾಸಕ ಸ್ವರೂಪ್ ಅವರೆ ನಿಮ್ಮ ಮತದಾರರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಸಾಮಾಜಿಕ ಜಾಲಜಾಣದಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದರು. ವ್ಹಿಲಿಂಗ್ ಪುಂಡರ ನಡುವೆ ನಕಲಿ ಗನ್ ಡಿದು ಓಡಾಡಿ ಪೊಲೀಸರಿಗೆ ತಲೆಬಿಸಿ ಉಂಟುಮಾಡಿದ ಇಬ್ಬರು ಬೈಕ್ ಸವಾರರನ್ನು ಹಾಸನ ಪೊಲೀಸರು ಬುಲೆಟ್ ಬೈಕ್ ಮತ್ತು ನಕಲಿ ಗನ್ ಸಮೇತ ವಶಕ್ಕೆ ಪಡೆದಿದ್ದಾರೆ. ವಿಡಿಯೋ ಸಂಬಂಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಪಿ ನಿರ್ದೇ ಶನದಂತೆ ಹಾಸನ ನಗರ ಪೊಲೀಸರು ಇಬ್ಬರು ಯುವ ಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಹರಿ ರಾಂ ಶಂಕರ್ ಅವರು ಯುವಕ ನಕಲಿ ಗನ್ ಹಿಡಿದು ಓಡಾ ಡಿ ದ್ದರು. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.