ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ಸೇರಿದಂತೆ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಡ್ರಗ್ ಪೆಡ್ಲರ್ ಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಯನ್ನು ಬಂಧಿಸಲಾಗಿದೆ.
ಡಾರ್ಕ್ ವೆಬ್ ಸೈಟ್ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಮಾಹಿತಿಯನ್ನು ಬೆನ್ನಟ್ಟಿದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನ. 4ರಂದು ದಾಳಿ ನಡೆಸಿದ್ದರು. ಫಾರಿನ್ ಪೋಸ್ಟ್ ಆಫೀಸ್‌ಗೆ ವಿದೇಶದಿಂದ ಡ್ರಗ್ಸ್ ಪಾರ್ಸೆಲ್ ಬರುತಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆರೋಪಿ ಸುಜಯ್ ಎಂಬಾತ ಗಾಂಜಾ ಸಮೇತ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ:ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ನಿವಾಸ, ಕಚೇರಿ ಮೇಲೆ ಎನ್ ಸಿಬಿ ದಾಳಿ
ಆರೋಪಿ ಸುಜಯ್ ವಿಚಾರಣೆಯ ವೇಳೆಗೆ ಮತ್ತಿಬ್ಬರು ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇವರಿಬ್ಬರು ಗೋವಾದಲ್ಲಿರುವ ಮಾಹಿತಿ ಪಡೆದು ಅಲ್ಲಿಗೆ ಪೊಲೀಸರು ತೆರಳಿದಾಗ ದರ್ಶನ್ ಕೂಡಾ ಸಿಕ್ಕಿಬಿದ್ದಾನೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.