Advertisement

ಪೊಲೀಸರಿಂದ ಆರು ಜನ ಕಳ್ಳರ ಬಂಧನ: 38 ಬೈಕ್‌ ವಶ

05:03 PM May 31, 2022 | Team Udayavani |

ಹರಿಹರ: ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರು ಯುವಕರ ತಂಡವನ್ನು ಬಂಧಿಸಿರುವ ಇಲ್ಲಿನ ನಗರಠಾಣೆ ಪೊಲೀಸರು, ಆರೋಪಿಗಳಿಂದ 38 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ನಗರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ, ದಾವಣಗೆರೆ, ಹಾವೇರಿ, ವಿಜಯನಗರ ಜಿಲ್ಲೆಯ ವಿವಿಧೆಡೆ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕದ್ದೊಯ್ಯುತ್ತಿದ್ದ ಆರು ಯುವಕರನ್ನು ಬಂಧಿಸಲಾಗಿದೆ. ಹರಿಹರ ತಾಲೂಕಿನ ರಾಜು, ಉಮೇಶ್‌, ಪ್ರಸನ್ನ, ಶಿವರಾಜ್‌, ಮಧು, ಪರಶುರಾಮ್‌ ಬಂಧಿತ ಆರೋಪಿಗಳು. ಸುಮಾರು 20-30 ವರ್ಷದವರಾದ ಇವರು ಕದ್ದ ವಾಹನಗಳನ್ನು ಬೇರೆಯವರ ಬಳಿ ಒತ್ತೆ ಇಟ್ಟು, ಅವರಿಂದ ಹಣ ಪಡೆದು ಮೋಜು ಮಸ್ತಿ ಮಾಡುತ್ತಿದ್ದರು. ಆರೋಪಿತರಲ್ಲಿ ಒಬ್ಬನ ಅನುಮಾನಾಸ್ಪದ ನಡವಳಿಕೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಂದಾಜು 14,80,000 ರೂ. ಮೌಲ್ಯದ ಒಟ್ಟು 38 ಬೈಕ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹರಿಹರ ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 8, ಗ್ರಾಮಾಂತರ ಠಾಣೆ 2, ಮಲೇಬೆನ್ನೂರು 4, ಚನ್ನಗಿರಿ 2, ಹದಡಿ 2, ಮಾಯಕೊಂಡ 1, ಸಂತೇಬೆನ್ನೂರು 1, ಹೊನ್ನಾಳಿ 1, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ 5, ಹಿರೇಕೇರೂರು 4, ಬ್ಯಾಡಗಿ 2, ಹಲಗೇರಿ 1, ರಾಣೆಬೆನ್ನೂರು 1, ಕುಮಾರಪಟ್ಟಣಂ 1, ಹಂಸಬಾವಿ 2, ವಿಜಯನಗರ ಜಿಲ್ಲೆಯ ಹಿರೇಹಡಗಲಿಯಲ್ಲಿ ಕಳುವಾಗಿದ್ದ 1 ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಹಾಯಕ ಪೊಲೀಸ್‌ ಅಧೀಕ್ಷಕಿ ಕನ್ನಿಕಾ ಸಕ್ರಿವಾಲ್‌, ಸಿಪಿಐ ಯು. ಸತೀಶಕುಮಾರ್‌, ಪಿಎಸ್‌ಐಗಳಾದ ಸುರೇಶ್‌, ಲತಾ ವಿ. ತಾಳೇಕರ್‌, ಸಿಬ್ಬಂದಿಗಳಾದ ನಾಗರಾಜ್‌ ಸುಣಗಾರ್‌, ದೇವರಾಜ್‌, ಮಂಜುನಾಥ್‌, ಶಿವರಾಜ್‌, ಹನುಮಂತ್‌, ಸತೀಶ್‌, ಸಿದ್ದರಾಜು, ನಾಗರಾಜ್‌, ಬೀರಲಿಂಗೇಶ್‌, ರಿಜ್ವಾನ್‌ ನಾಸೂರ್‌, ಕರಿಯಪ್ಪ, ಕಾಂತರಾಜು, ದಿಲೀಪ್‌, ಲಿಂಗರಾಜ್‌, ದಿಳ್ಳೆಪ್ಪ, ರವಿ ನಾಯ್ಕ, ಮುರಳೀಧರ ಆರೋಪಿಗಳ ಪತ್ತೆ ಕಾರ್ಯದ ತಂಡದಲ್ಲಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next