Advertisement

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

09:32 PM Sep 21, 2024 | Team Udayavani |

ರೇಕ್ಯವಿಕ್‌: ಬರೋಬ್ಬರಿ 8 ವರ್ಷಗಳ ಬಳಿಕ ಐಸ್‌ಲ್ಯಾಂಡ್‌ನ‌ ಗ್ರಾಮವೊಂದಕ್ಕೆ ಅಪರೂಪದ ಹಿಮಕರಡಿ ಆಗಮಿಸಿದೆ. ಆದರೆ, ಜನರಿಗೆ ಪ್ರಾಣಾಪಾಯ ಉಂಟು ಮಾಡಬಹುದು ಎಂಬ ಭೀತಿಯಿಂದ ಅಧಿಕಾರಿಗಳು ಅದನ್ನು ಗುಂಡಿಟ್ಟು ಕೊಂದಿದ್ದಾರೆ.

Advertisement

ಒಂಟಿ ವೃದ್ಧೆಯೊಬ್ಬರ ನಿವಾಸದ ಸಮೀಪದಲ್ಲಿ ಹಿಮಕರಡಿ ಕಂಡುಬಂದಿದ್ದು, ಭಯಭೀತರಾದ ವೃದ್ಧೆ ಮೇಲ್ಮಹಡಿಯಲ್ಲಿ ಕುಳಿತು ತಮ್ಮ ಪುತ್ರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸರು ಅದನ್ನು ಗುಂಡು ಹಾರಿಸಿ ಕೊಂದಿದ್ದಾರೆ. 2016ರ ಬಳಿಕ ಮೊದಲ ಬಾರಿಗೆ ಐಸ್‌ಲ್ಯಾಂಡ್‌ನ‌ಲ್ಲಿ ಹಿಮಕರಡಿ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next