ನವದೆಹಲಿ: ಉಕ್ರೇನ್‌ನೊಂದಿಗಿದೆ ನಡೆಯುತ್ತಿರುವ ಯುದ್ದವನ್ನು ಕೊನೆಗೊಳಿಸಲು ಭಾರತ ರಷ್ಯಾದ ಮನವೊಲಿಸಬೇಕು ಎಂದು ಪೋಲೆಂಡ್‌ನ ರಾಯಭಾರಿ ಆಡಮ್ ಬುರಾಕೋವ್ಸ್ಕಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಮಾಡಿದ ಅವರು, ಫೆಬ್ರವರಿಯಲ್ಲಿ ರಷ್ಯಾ- ಉಕ್ರೇನ್ ಅನ್ನು ಆಕ್ರಮಿಸಿತು. ಈ ಯುದ್ದ ನೆರೆ ರಾಷ್ಟ್ರಗಳ ಮೇಲೆ ಪ್ರಭಾವ ಬೀರಿತು. ವಿಶೇಷವಾಗಿ ಪೋಲೆಂಡ್‌ನಂತಹ ಮುಂಚೂಣಿ ರಾಜ್ಯಗಳು ನಿರಾಶ್ರಿತರಿಂದ ಮುಳುಗಿದವು. ಉಕ್ರೇನ್ ಗಡಿಯಲ್ಲಿರುವ ಪೋಲೆಂಡ್ ದೇಶದಿಂದ ಪಲಾಯನ ಮಾಡುವವರಿಗೆ ಮಾನವೀಯ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಭಾರತವು ರಷ್ಯಾದೊಂದಿಗೆ ಮಾತನಾಡಿ, ಈ ಯುದ್ಧವು ರಷ್ಯಾದ ಲಾಭಕ್ಕಾಗಿ ಅಲ್ಲ ಎಂದು ಅವರಿಗೆ ಮನವರಿಕೆ ಮಾಡಬಹುದು. ಅಂದರೆ, ರಷ್ಯಾಕ್ಕೆ ಈ ಯುದ್ಧದಿಂದ ಪ್ರಯೋಜನವಿಲ್ಲ ಮತ್ತು ರಷ್ಯಾವು ಉಕ್ರೇನ್ ಆಕ್ರಮಿತ ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮೂಲಕ ಈ ಯುದ್ಧವನ್ನು ನಿಲ್ಲಿಸಬಹುದು ಎಂದರು.
ಇದನ್ನೂ ಓದಿ:ಮಂಗಳೂರಿನಲ್ಲಿ ಪ್ರಧಾನಿ ಮೋದಿ 3700 ಕೋಟಿ ಮೊತ್ತದ ಕಾಮಗಾರಿಗೆ ಪ್ರಧಾನಿ ಚಾಲನೆ
ಭಾರತ ಮತ್ತು ರಷ್ಯಾ ನಿಕಟವಾದ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ರಕ್ಷಣೆ ಮತ್ತು ಈಗ ಶಕ್ತಿಯು ಸಂಬಂಧದ ಮುಖ್ಯ ಆಧಾರಸ್ತಂಭಗಳಾಗಿವೆ. ಭಾರತದ ವಿದೇಶಾಂಗ ನೀತಿಯು ತಟಸ್ಥತೆಯಿಂದ ಕೂಡಿದ್ದು, ಭಾರತ ಎಲ್ಲರೊಂದಿಗೆ ಮಾತನಾಡುತ್ತದೆ ಎಂದರು.