Advertisement
ಪೋಲೆಂಡ್ ಮೇಲೆ ದಾಳಿ ನಡೆಸಿರುವ ಕ್ಷಿಪಣಿ ದಾಳಿಯನ್ನು ರಷ್ಯಾ ಸಂಪೂರ್ಣವಾಗಿ ನಿರಾಕರಿಸಿದೆ. ಆದರೆ ನ್ಯಾಟೋ ಈ ಬಗ್ಗೆ ತುರ್ತು ಸಭೆ ಕರೆದಿದ್ದು, ರಷ್ಯಾದ ರಾಯಭಾರಿಯನ್ನು ಸಭೆಗೆ ಕರೆಸಿದೆ. ಒಂದು ವೇಳೆ ರಷ್ಯಾದ ಕ್ಷಿಪಣಿ ದಾಳಿ ನಿಜವೆಂದು ಸಾಬೀತಾದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು ವಿಭಿನ್ನ ತಿರುವು ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ನಗರ ಸೇರಿದಂತೆ ಉಕ್ರೇನ್‌ನ ವಿವಿಧೆಡೆ ರಷ್ಯಾ ಕ್ಷಿಪಣಿ ದಾಳಿ ಮುಂದುವರಿಸಿದ್ದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಇಡೀ ದೇಶ ಕಗ್ಗತ್ತಲಲ್ಲಿ ಮುಳುಗುವಂತೆ ಮಾಡಿತ್ತು.
Related Articles
Advertisement