ವಾರ್ಸಾ (ಪೋಲೆಂಡ್): ಮೇ ಅಂತ್ಯದಲ್ಲಿ ಪೋಲೆಂಡ್ ಸೈನಿಕರು ಆಕಸ್ಮಿಕವಾಗಿ ಜೆಕ್ ಗಣರಾಜ್ಯದ ಭೂಪ್ರದೇಶದೊಳಕ್ಕೆ ನುಗ್ಗಿ ಅಲ್ಲಿನ ಪ್ರದೇಶಗಳನ್ನು ಸ್ವಲ್ಪ ಸಮಯದವರೆಗೆ ಅತಿಕ್ರಮಿಸಿಕೊಂಡಿದ್ದರು.
ಪೋಲೆಂಡ್ ಸರಕಾರ ಕೂಡಾ ಇದನ್ನು ದೃಢಪಡಿಸಿದ್ದು, ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಸಮಜಾಯಿಸಿ ನೀಡಿದೆ.
ಘಟನೆಯೇನು?: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋಲೆಂಡ್ ಯೋಧರು, ಚೆಕ್ ಗಣರಾಜ್ಯ ನಡುವಿನ ಗಡಿಯಲ್ಲಿ ಗಸ್ತು ತಿರುಗುತ್ತಿದ್ದರು.
ಈ ವೇಳೆ, ದಕ್ಷಿಣ ಪೋಲೆಂಡ್‌ನ ಪೀಲ್‌ಗ್ರಿಜೈಮೊ ಬಳಿ ಇರುವ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಗಡಿಯಾಚೆಯಿಂದ ಆಗಮಿಸುತ್ತಿದ್ದರು.
ಈ ವೇಳೆ, ತಿರುಗುತ್ತಿದ್ದ ಪೋಲೆಂಡ್‌ನ ಯೋಧರು ಗಡಿ ದಾಟಿ, ಚರ್ಚ್‌ಗೆ ಭೇಟಿ ನೀಡಲು ಬರುತ್ತಿದ್ದವರನ್ನು ವಾಪಸ್ ಕಳಿಸಿದರು.
ಕೆಲ ಕಾಲ ಆ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಚೆಕ್ ಗಣರಾಜ್ಯದ ಅಧಿಕಾರಿಗಳು, ಪೋಲೆಂಡ್‌ಯೋಧರನ್ನು ವಾಪಸ್ ಕಳಿಸಿದರು.
ಅಲ್ಲದೆ, ಪೋಲೆಂಡ್ ರಾಯಭಾರ ಕಚೇ ರಿಗೆ ಮಾಹಿತಿ ನೀಡಿದರು. ಬಳಿಕ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು ಎಂದಿದೆ ಮಾಧ್ಯಮ ವರದಿ.