ಪುಣೆ: ಅವಿಭಜಿತ ದಕ್ಷಿಣ ಕನ್ನಡ ಜಿÇÉೆಯವರಾದ ನಾವು ಉದ್ಯಮ, ವ್ಯಾಪಾರ, ಉದ್ಯೋಗಿಗಳಾಗಿ ಕಾರ್ಯ ಗೈಯುತ್ತಾ ಬೆಳೆದವರು. ಇದಕ್ಕೆಲ್ಲ ನಮಗೆ ಪ್ರೇರಣೆ ನೀಡಿದವರು ಆಶೀರ್ವಾದ ನೀಡಿದವರು ತುಳು ನಾಡಿನಲ್ಲಿ ನಾವು ನಂಬಿಕೊಂಡು ಬಂದಿರುವ ದೈವ-ದೇವರುಗಳು. ನಮ್ಮ ತುಳುನಾಡಿನ ಪ್ರತಿಯೊಂದು ಪುರಾತನ ದೇವಾಲಯಗಳು, ಕಾರಣಿಕ ಮತ್ತು ಪಾವಿತ್ರÂತೆಯನ್ನು ಹೊಂದಿವೆ. ಅಂತಹ ದೈವ-ದೇವರುಗಳ ಗಂಧ ಪ್ರಸಾದದ ಬೂಳ್ಯವನ್ನು ಹಿಡಿದುಕೊಂಡು ಹೊರಟು ಬಂದ ನಾವು ಇಂದು ಇಲ್ಲಿ ಬಲಿಷ್ಠರಾಗಿದ್ದೇವೆ. ಇದಕ್ಕೆಲ್ಲ ನಾವು ನಂಬಿಕೊಂಡು ಬಂದಿರುವ ದೈವ ದೇವರು ಹಾಗು ನಮ್ಮ ಹಿರಿಯ ಆಶೀರ್ವಾದವಾಗಿದೆ. ತುಳುನಾಡಿನಲ್ಲಿ ಎಳುವೆರ್ ದೇವಿಯರು ನೆಲೆನಿಂತ ಪುಣ್ಯ ಸ್ಥಳ ನಮ್ಮದು. ಹಾಗೆಯೇ ಇನ್ನು ಹಲವಾರು ಕ್ಷೇತ್ರಗಳು ತುಳುನಾಡಿನಲ್ಲಿದ್ದು ಪುಣ್ಯ ಭೂಮಿಯನ್ನಾಗಿಸಿದೆ. ಅಂತಹ ತುಳುನಾಡಿನ ಪುರಾತನ ಕ್ಷೇತ್ರಗಳಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರವು ಒಂದು. ಈ ಪುಣ್ಯ ಕ್ಷೇತ್ರದ ಜೀರ್ಣೋ¨ªಾರದ ಕಾರ್ಯ ಮಾಡುವ ಭಾಗ್ಯ ನಮ್ಮ ಕಾಲದಲ್ಲಿ ಒದಗಿ ಬಂದಿದೆ. ಇದರಲ್ಲಿ ಪಾಲ್ಗೊಳ್ಳುವ ಸದವಕಾಶ ನಮಗೆ ದೊರೆತಿದೆ. ಈಗಾಗಲೇ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳು ಭರದಿಂದ ಸಾಗುತ್ತಿದ್ದು, ಮಾರ್ಚ್ 10ರಂದು ಪುನಃ ಪ್ರತಿಷ್ಠೆ, ಮಾ. 13ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಪುಣೆಯಲ್ಲಿ ನಾವು ಈ ಮೊದಲು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಮುಂಬಯಿ ಸಮಿತಿ ಅಧ್ಯಕ್ಷರು, ಕ್ಷೇತ್ರಕ್ಕೆ ಸಂಬಂಧಪಟ್ಟ ಹಿರಿಯರು ಕ್ಷೇತ್ರದ ಭಕ್ತರ ಸಮ್ಮುಖದಲ್ಲಿ ಸಮಾಲೋಚನ ಸಭೆಯನ್ನು ನಡೆಸಿದ್ದೇವೆ. ಇದೀಗ ಪುಣೆ ಸಮಿತಿಯನ್ನು ರಚಿಸಿ ಆ ಮೂಲಕ ಕಾರ್ಯೋನ್ಮುಖರಾಗಿದ್ದೇವೆ. ಈ ಕಾರ್ಯದಲ್ಲಿ ಎಲ್ಲರು ಸೇರಿಕೊಂಡು ಅಮ್ಮನ ಸೇವೆಯಲ್ಲಿ ಬಾಗಿಗಳಾಗಬೇಕು ಎಂದು ಪೊಳಲಿ ಜೀರ್ಣೋದ್ಧಾರ ಪುಣೆ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಪಿಂಪ್ರಿ-ಚಿಂಚಾÌಡ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ ನುಡಿದರು.
ಡಿ. 6ರಂದು ಪುಣೆಯ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್‌ನ ಹಾಲ್‌ನಲ್ಲಿ ಜರಗಿದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಪುಣೆ ಸಮಿತಿ ರಚನೆ ಮತ್ತು ಕಾರ್ಯಗೈಯುವ ಬಗ್ಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುಣೆಯಲ್ಲಿರುವ ಭಕ್ತರ ಸಹಕಾರ ಪೊಳಲಿ ಅಮ್ಮನ ಸೇವೆಗೆ ಕೃತಜ್ಞತಾಪೂರ್ವಕವಾಗಿ ಸಿಗಬಹುದು. ಪೊಳಲಿ ಅಮ್ಮನೇ ನಮಗೆ ಪ್ರೇರಣೆ ಕೊಟ್ಟಿ¨ªಾರೆ. ಆ ಪ್ರಕಾರವಾಗಿ ಇಲ್ಲಿ ಅಮ್ಮನ ಭಕ್ತ ವೃಂದದವರು ಸೇರಿ ಈ ಒಂದು ಸಮಿತಿಯನ್ನು ರಚಿಸಿದ್ದೇವೆ. ಇದು ಅಮ್ಮನ ಸೇವೆಯೆಂದು ತಾವೆಲ್ಲರೂ ಈ ಮಹಾನ್ ಕಾರ್ಯದಲ್ಲಿ ಭಾಗಿಗಳಾಗಿ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿಯೂ ಉಪಸ್ಥಿತರಿರಬೇಕು ಎಂದು ಹೇಳಿದರು.
ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಶೆಟ್ಟಿ ಮಿಯ್ನಾರು ಅವರು ಮಾತನಾಡಿ, ನಮ್ಮನ್ನು ಹರಸಿ ಬೆಳೆಸಿದ ನಮ್ಮ ತುಳುನಾಡಿನ ನಾವು ನಂಬಿದ ದೈವ-ದೇವರುಗಳ ಸೇವೆ ಎಂದಾಗ ಮನಸ್ಸು ಪುಳಕಿತಗೊಳ್ಳುತ್ತದೆ ಎಂದು ಹೇಳಿದರು.
ಇದೀಗ ಪೊಳಲಿ ಅಮ್ಮನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಮನಸ್ಸು ನಿರ್ಮಲ ವಾಗಿರುವ ಆಸ್ತಿಕ ಭಕ್ತರಿಗೆ ಪ್ರತಿಯೊಂದು ದೈವ ದೇವರುಗಳ ಕಾರ್ಯವನ್ನು ಮಾಡುವ ಯೋಗ ಒದಗಿಬರುತ್ತದೆ. ಅಂತಹ ಒಂದು ಯೋಗ ಪೊಳಲಿ ರಾಜರಾಜೇಶ್ವರಿ ಅಮ್ಮನವರ ದಿವ್ಯ ದೇಗುಲದ ಪುನಃ ನಿರ್ಮಾಣ ಕಾರ್ಯದಲ್ಲಿ ನಮಗೆ ಒದಗಿ ಬಂದಿದೆ. ಅದನ್ನು ನಾವೆಲ್ಲರೂ ದೇವ ಕಾರ್ಯವೆಂದು ಪಾಲಿಸಿ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಪುಣೆ ತುಳು ಕೂಟದ ನೂತನ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿತ್ ಶೆಟ್ಟಿ ಅವರು ಪೊಳಲಿ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಮತ್ತು ಪುಣೆ ಸಮಿತಿ ರಚನೆ ಹಾಗೂ ಯಾವ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂಬುವುದರ ಬಗ್ಗೆ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು.
ಸಭೆಯಲ್ಲಿ ಪ್ರಮುಖರಾದ ಪುಣೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಗಣೇಶ್ ಹೆಗ್ಡೆ, ಪಿಂಪ್ರಿ-ಚಿಂಚಾÌಡ್ ಬಂಟ್ಸ್ ಸಂಘದ ಉಪಾಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕೋಶಾಧಿಕಾರಿ ಶ್ರೀಧರ ಶೆಟ್ಟಿ ಕÇÉಾಡಿ, ಪುಣೆ ಬಂಟ್ಸ್ ಅಸೋಸಿಯೇಶನ್ ಕೋಶಾಧಿಕಾರಿ ದಿನೇಶ್ ಶೆಟ್ಟಿ, ಪುಣೆ ಕುಲಾಲ ಸಂಘದ ಕಾರ್ಯದರ್ಶಿ ನವೀನ್ ಬಂಟ್ವಾಳ್, ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ ಉಮೇಶ್ ಬಿ. ಶೆಟ್ಟಿ, ನಾಗರಾಜ್ ಶೆಟ್ಟಿ, ಸುರೇಶ್ ಎಲ್. ಶೆಟ್ಟಿ, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ, ಉಮಾ ಡಿ. ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ರೋಹಿತ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ:ಹರೀಶ್ ಮೂಡಬಿದ್ರಿ