Advertisement
ಸುಮಾರು 200 ವರ್ಷಗಳ ಬಳಿಕ ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಬ್ರಹ್ಮಕಲಶೋತ್ಸವ ಜರಗುತ್ತಿರುವುದರಿಂದ ಈ ಬಾರಿಯ ಬ್ರಹ್ಮಕಲಶೋತ್ಸವ ಅಪೂರ್ವ ಸಂಭ್ರಮವಾಗಿದೆ.
ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಮಾ. 4ಕ್ಕೆ ಆರಂಭಗೊಳ್ಳಲಿವೆ. ಮಾ. 13ರಂದು ಬೆಳಗ್ಗೆ 7.40 ರಿಂದ 8.10ರ ಮುಹೂರ್ತದಲ್ಲಿ ಶ್ರೀ ದುರ್ಗಾಪರಮೇಶ್ವರೀ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ರಾಜರಾಜೇಶ್ವರೀ ಹಾಗೂ ದುರ್ಗಾಪರಮೇಶ್ವರೀ ದೇವರಿಗೆ 500 ಕಲಶ, ಪರಿವಾರ ದೇವರಿಗೆ 108 ಕಲಶಗಳ ಮೂಲಕ ಬ್ರಹ್ಮಕಲಶ ನಡೆಯಲಿದೆ. ದೇಶದಲ್ಲಿ ಪೊಳಲಿಯಲ್ಲಿ ಮಾತ್ರ ಮಣ್ಣಿನ ಮೂರ್ತಿ ಇರುವುದರಿಂದ ಇಲ್ಲಿ ಲೇಪಾಷ್ಠಬಂಧ ಬ್ರಹ್ಮಕಲಶಾಭಿಷೇಕ ನಡೆಯುವುದು ವಿಶೇಷವಾಗಿದೆ. ಎರಡು ವೇದಿಕೆಗಳಲ್ಲಿ ಪ್ರತಿದಿನ ಸಂಜೆ 6 ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
Related Articles
ಭಕ್ತರ ವಾಹನಗಳ ನಿಲುಗಡೆಗೆ ಸುಮಾರು 22 ಎಕ್ರೆ ಪ್ರದೇಶವನ್ನು ಸಿದ್ಧಗೊಳಿಸಲಾಗಿದೆ. 8 ಸಾವಿರ ಸ್ವಯಂಸೇವಕರು ಸಜ್ಜಾಗಿದ್ದಾರೆ. ಅರೋಗ್ಯಸೇವೆನೀಡಲು ಕ್ಲಿನಿಕ್ ತೆರೆಯಲಾಗಿದೆ. ಸ್ವತ್ಛತೆ ಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ವಹಿಸಲಾಗಿದ್ದು ರಾಸಾಯನಿಕ ಶೌಚಾಲಯವೂ ಸೇರಿದಂತೆ ಸುಮಾರು 70 ಶೌಚಾಲಯ ನಿರ್ಮಿಸಲಾಗಿದೆ. ಭದ್ರತೆಯ ನಿಟ್ಟಿನಲ್ಲೂ ಸಕಲ ಸಿದ್ಧತೆ ಮಾಡಲಾಗಿದೆ.
Advertisement
10 ಲಕ್ಷ ಭಕ್ತರ ನಿರೀಕ್ಷೆಬ್ರಹ್ಮಕಲಶೋತ್ಸವದಲ್ಲಿ ಸುಮಾರು10 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲ ದಿನಗಳಲ್ಲೂ ಭಕ್ತರಿಗೆ ಉಪಾಹಾರ, ಅನ್ನದಾಸೋಹ ನಡೆಯಲಿದ್ದು ವಿಶಾಲ ಭೋಜನಶಾಲೆ, ಪಾಕಶಾಲೆ ನಿರ್ಮಿಸಲಾಗಿದೆ. ದೇವಸ್ಥಾನದ ಪರಿಸರ ಸಂಪೂರ್ಣ ಸಿಸಿ ಕೆಮರಾದ ಕಣ್ಗಾವಲಿನಲ್ಲಿದೆ. ಭಕ್ತರ ನೆರವಿಗೆ ಕಂಟ್ರೋಲ್ ರೂಂ ತೆರೆಯಲಾಗಿದೆ. ಪೊಲೀಸ್ ಔಟ್ ಪೋಸ್ಟ್ ಕೂಡ ಕಾರ್ಯಾಚರಿಸಲಿದೆ.