Advertisement

ಪೊಳಲಿ: ರಾಷ್ಟ್ರೀಯ ಯುವ ದಿನಾಚರಣೆ

06:11 AM Jan 13, 2019 | |

ಪೊಳಲಿ: ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಪೊಳಲಿ ರಾಮ ಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಅವರು ಚಾಲನೆ ನೀಡಿದರು.

Advertisement

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿದ್ಯಾ ರ್ಥಿಗಳ ಜಾಥಾವು ಘೋಷಣೆಗಳನ್ನು ಕೂಗುತ್ತಾ ಪೊಳಲಿ ದೇವಸ್ಥಾನದ ರಥಬೀದಿಯಾಗಿ ಸಾಗಿ ಅಡ್ಡೂರಿಗೆ ತಲುಪಿತು. ಅಲ್ಲಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಜತೆಯಾದ ಜಾಥಾವು ಅಡ್ಡೂರು ಜಂಕ್ಷನ್‌ ತಲುಪಿದಾಗ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ ನೇತೃತ್ವದ ಯುವಜನರು ಸ್ವಾಗತಿಸಿದರು.

ಬಳಿಕ ತಪೋವನಕ್ಕೆ ಮರಳಿದ ಜಾಥಾದಲ್ಲಿ ವಾಮಂಜೂರು ಶುಭೋದಯ, ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆ, ಪೊಳಲಿ ವಿದ್ಯಾ ವಿಲಾಸ ಅನುದಾನಿತ ಶಾಲೆ, ಮಂಗಳೂರು ವಿವಿ ಕಾಲೇಜು, ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶಾಲಾ- ಕಾಲೇಜು, ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಳ್ಳಿಪಾಡಿ ವಿದ್ಯಾ ರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬಂದಿ ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಸ್ಪರ್ಧೆಗಳು
ತಪೋವನದಲ್ಲಿ ವಿದ್ಯಾಥಿಗಳಿಗಾಗಿ ಆಶು ಭಾಷಣ, ಪ್ರಬಂಧ ಸರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು. ಸ್ವಾಮಿ ಪ್ರಣವಾನಂದಾಜಿ, ವೆಂಕಟೇಶ ನಾವಡ, ತಾ.ಪಂ. ಸದಸ್ಯ ಯಶವಂತ ಪೊಳಲಿ, ಲೋಕೇಶ್‌ ಭರಣಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪೊಳಲಿ ಶಾಖೆಯ ಯೋಗಬಂಧುಗಳು, ಆಶ್ರಮದ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.

ರೋಟರಿ ಕೇಂದ್ರೀಯ ಶಾಲೆ: ರಾಷ್ಟ್ರೀಯ ಯುವದಿನಾಚರಣೆ
ಮೂಡುಬಿದಿರೆ:
ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರೋಟರಿ ಕೇಂದ್ರೀಯ ಶಾಲೆಯಲ್ಲಿ ರಾಷ್ಟ್ರೀಯ ಯುವದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಭಾರತಿ ನಾಯಕ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

Advertisement

ವಿದ್ಯಾರ್ಥಿನಿ ಶರಣ್ಯ ಬೋರ್ಕರ್‌ ಮಾತನಾಡಿ, ಸ್ವಾಮಿ ವಿವೇಕಾನಂದರ ಕುರಿತು ಮಾಹಿತಿಯನ್ನು ನೀಡಿದರು. ಪುಟಾಣಿಗಳು ವಿವೇಕಾನಂದರ ಉಡುಗೆಯನ್ನು ತೊಟ್ಟು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿದರು. ಶಕುಂತಲಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next