Advertisement

ಪೊಯಿಸಾರ್‌ ಜಿಮ್ಖಾನ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ 

04:06 PM Jan 05, 2018 | Team Udayavani |

ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ, ಸಮಾಜ ಸೇವಕ ಗೋಪಾಲ್‌ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ  ಸ್ಥಾಪನೆಗೊಂಡ ಪೊಯಿಸಾರ್‌ ಜಿಮಾVನದಲ್ಲಿ ಮುಂಬಯಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮವು  ನಡೆಯಿತು.

Advertisement

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 92 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅರ್ಥಪೂರ್ಣ ಸಮಾರಂಭದಲ್ಲಿ ನಗರ ಮತ್ತು ಉಪನಗರಗಳಲ್ಲಿ ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಕಲಾ ರಂಗಗಳಲ್ಲಿ ಗುರುತರ ಸಾಧನೆಗೈದ ಸುಮಾರು 45 ಕ್ಕೂ ಅಧಿಕ ಯುವ ಪ್ರತಿಭೆಗಳನ್ನು ಅವರ ಹೆತ್ತವರೊಂದಿಗೆ ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯೊಂದಿಗೆ ಸಮ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ಉದ್ಯಮಿಗಳು, ಗಣ್ಯರು  ಸೇರಿದಂತೆ 600 ಕ್ಕೂ ಅಧಿಕ ಮಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಸಂಸದ ಗೋಪಾಲ್‌ ಶೆಟ್ಟಿ ಮಾತನಾಡಿ, ಮೋದಿ ಸರಕಾರದ ಧ್ಯೇಯ-ಧೋರಣೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, 21 ಶತಮಾನದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಒಂದು ಸರ್ವತೋಮುಖ ಅಭಿವೃದ್ಧಿಯ ದೇಶವನ್ನಾಗಿಸುವಲ್ಲಿ ಯುವ ಜನಾಂಗವು ಮಹತ್ತರ ಕೊಡುಗೆಯನ್ನು ನೀಡಬೇಕು. ಅದಕ್ಕಾಗಿ ಹಿರಿಯರಾದ ನಾವೆಲ್ಲರೂ ಯುವ ಜನಾಂಗವನ್ನು ಪ್ರೋತ್ಸಾಹಿಸುವ, ಅಭಿನಂದಿಸುವ ಕೆಲಸಗಳನ್ನು ನಿರಂತರವಾಗಿ ಮಾಡಬೇಕಾಗಿದೆ. ನಮ್ಮ ದೇಶವು ವಿಶ್ವದಲ್ಲೇ ಅತ್ಯಧಿಕ ಯುವ ಜನಾಂಗವನ್ನು ಹೊಂದಿರುವ ದೇಶವಾಗಿದೆ. 2014 ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 10 ರಿಂದ 24 ವರ್ಷದೊಳಗಿನ ಯುವ ಜನಾಂಗವು ಸುಮಾರು 35 ಕೋ. ಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಯುವ ಶಕ್ತಿಯನ್ನು ನಮ್ಮ ದೇಶದ ಅಭಿವೃದ್ಧಿ ಹಾಗೂ ವಿಕಸನಕ್ಕೆ ತೊಡಗಿಸಿಕೊಳ್ಳಲು ಪಣತೊಟ್ಟಿದ್ದಾರೆ. ಅದಕ್ಕಾಗಿ ವಿವಿಧ ರಂಗಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭಾ ವಿಕಸನಕ್ಕೆ ಅವಕಾಶಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿಯನ್ನು ಪ್ರತೀಯೋರ್ವ ಹಿರಿಯ ನಾಗರಿಕರು, ಸಾಮಾಜಿಕ ಸಂಘ-ಸಂಸ್ಥೆಗಳು, ಸರಕಾರಿ ಇಲಾಖೆಗಳು, ವಿವಿಧ ಖಾಸಗಿ, ಸರಕಾರಿ ಸಾಮ್ಯದ ವಾಣಿಜ್ಯ ಸಂಸ್ಥೆಗಳ ವಹಿಸಿಕೊಳ್ಳಬೇಕಾಗಿದೆ. ಪ್ರಧಾನಿ ಮೋದಿ ಅವರ ಸದುದ್ಧೇಶಗಳನ್ನು ತಳಮಟ್ಟದಲ್ಲಿ ಪರಿಚಯಿಸಿ ಯುವ ಜನಾಂಗವನ್ನು ದೇಶದ ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆತರಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಕಾಂದಿವಲಿ ಜಿಮಾVನದ ಆಡಳಿತ ಮಂಡಳಿಯವರ ಪ್ರಯತ್ನ ನಿಜವಾಗಿಯೂ ಅಭಿನಂದನೀಯವಾಗಿದೆ ಎಂದರು.

ವೇದಿಕೆಯಲ್ಲಿ ಅತಿಥಿಗಳಾಗಿ ನಗರ ಸೇವಕರುಗಳಾದ ವಿದ್ಯಾರ್ಥಿ ಸಿಂಗ್‌, ಬೀನಾ ದೋಶಿ, ಅಂಜಲಿ ಖೇಡೆಕರ್‌, ಲೀನಾ ಹೆಣ್ಣಾರ್ಕರ್‌, ಪ್ರತಿಭಾ ಗಿರ್ಕಾರ್‌, ಪೊಯಿಸರ್‌ ಜಿಮಾVನದ ಅಧ್ಯಕ್ಷ ಮುಕೇಶ್‌ ಭಂಡಾರಿ, ಉಪಾಧ್ಯಕ್ಷ ಕರುಣಾಕರ ಸಿ. ಶೆಟ್ಟಿ, ವಿಶ್ವಸ್ಥ, ಕೋಶಾಧಿಕಾರಿ ಭರತ್‌ ವಾರೇಖ್‌, ವಿಶ್ವಸ್ಥೆ ರನ್ನಾಬೆನ್‌ ದೋಶಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರತಿಭೆಗಳಾದ ಕ್ರಿಕೆಟ್‌ಪಟು ಸಿದ್ಧೇಶ್‌ ಲಾಡ್‌, ಶಾಟ್‌ಫುಟ್‌ಪಟು ಕು| ಹರ್ಷಿತಾ ಶೆಟ್ಟಿ, ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ವಿಜೇತೆ ಮರಿಯಾ ಸಿದ್ಧಿಕಿ, ರವಾಂಡ ದೇಶದ ಶಾಂತಿಧೂತೆ ನೈಸಾ ಸಾಂಘಿÌ ಅವರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ತುಳು-ಕನ್ನಡಿಗರ ಪ್ರತಿಭಾವಂತ ಮಕ್ಕಳಾದ ಭರತನಾಟ್ಯ ಕ್ಷೇತ್ರದ ಸಾಧಕಿಯರುಗಳಾದ ಕು| ಅಸ್ತಾ ಪ್ರಕಾಶ್‌ ಶೆಟ್ಟಿ, ಕು| ಪ್ರಾರ್ಥನಾ ಪ್ರಕಾಶ್‌ ಶೆಟ್ಟಿ, ಕು| ಅಂಜನಾ ಮಹೇಶ್‌ ಶೆಟ್ಟಿ ಹಾಗೂ ಕ್ರೀಡಾಕ್ಷೇತ್ರದ ಸಾಧಕರುಗಳಾದ ಕು| ಹರ್ಷಿತಾ ಶೆಟ್ಟಿ, ಕು| ನಿಧಿ ರೈ, ಕು| ಸೃಷ್ಠಿ ಶೆಟ್ಟಿ, ಕು| ಶ್ರೇಯಸ್‌ ಶೆಟ್ಟಿ, ಕು| ರಿಸಿಕಾ ಶೆಟ್ಟಿ, ವೈದೇಹಿ ಬಂಗೇರ ಅವರನ್ನು ಪ್ರತಿಭಾಪುರಸ್ಕಾರವನ್ನಿತ್ತು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next