Advertisement

‘ಪೊಗರು ಅಣ್ಣನಿಗೆ ಪೊಗರು’…ಧೂಳೆಬ್ಬಿಸುತ್ತಿದೆ ಟೈಟಲ್ ಟ್ರ್ಯಾಕ್

07:49 PM Feb 14, 2021 | Team Udayavani |

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ ಬಹುನಿರೀಕ್ಷಿತ ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಸಂಜೆ ಬಿಡುಗಡೆಯಾಗಿದ್ದು, ಯುಟ್ಯೂಬ್ ನಲ್ಲಿ ಸಖತ್ ಧೂಳೆಬ್ಬಿಸುತ್ತಿದೆ.

Advertisement

ಇಂದು ಸಂಜೆ 7 ಗಂಟೆಯಿಂದ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಇತ್ತ ಯುಟ್ಯೂಬ್ ನಲ್ಲಿ ಚಿತ್ರದ ಟೈಟಲ್ ಟ್ರ್ಯಾಕ್ ‘ಪೊಗರು ಅಣ್ಣನಿಗೆ ಪೊಗರು’ ರಿಲೀಸ್ ಆಗಿದೆ. ಜಬರ್ದಸ್ತಾಗಿ ಮೂಡಿ ಬಂದಿರುವ ಈ ಹಾಡು ಬಿಡುಗಡೆಯಾದ ಕೇವಲ ಒಂದು ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 77 ಸಾವಿರ ಜನ ಯುಟ್ಯೂಬ್ ನಲ್ಲಿ ಲೈಕ್ ಒತ್ತಿದ್ದಾರೆ.

ಧ್ರುವ ಸರ್ಜಾ ಅವರ ‘ಭರ್ಜರಿ’ ಸಿನಿಮಾ ಬಳಿಕ ‘ಪೊಗರು’ ತೆರೆಗೆ ಬರುತ್ತಿದ್ದು ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಮೂರು ವರ್ಷಗಳ ಕಾಲ ಚಿತ್ರತಂಡ ಅವಿರತ ಶ್ರಮವಹಿಸಿ ಸಿನಿಮಾ ಸಿದ್ದಗೊಳಿಸಿದೆ. ಇದೇ ಫೆ. 19 ರಂದು ರಾಜ್ಯಾದ್ಯಂತ ಭರ್ಜರಿಯಾಗೇ ತೆರೆಕಾಣಲಿದೆ ಪೊಗರು.

ಇನ್ನು ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ ನಟಿಯಾಗಿ ನಟಿಸಿದ್ದಾರೆ.  ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.  ಬಿ.ಕೆ. ಗಂಗಾಧರ ಹಣ ಹೂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next