Advertisement
ಧ್ರುವ ಈ ಹಿಂದಿನ ಮೂರು ಸಿನಿಮಾಗಳಲ್ಲೂ ತಮ್ಮ ಡೈಲಾಗ್ ಡೆಲಿವರಿ ಹಾಗೂ ಹೈವೋಲ್ಟೇಜ್ ಆ್ಯಕ್ಷನ್ ಮೂಲಕ ಹೆಚ್ಚು ಗಮನ ಸೆಳೆದವರು. ಈಗ “ಪೊಗರು’ ಚಿತ್ರದಲ್ಲಿ ನಿರ್ದೇಶಕ ನಂದಕಿಶೋರ್ ಅವೆಲ್ಲವನ್ನು ಯಥೇತ್ಛವಾಗಿ ನೀಡಿದ್ದಾರೆ. ಆ ಮಟ್ಟಿಗೆ “ಪೊಗರು’ ಪಕ್ಕಾ ಪೈಸಾ ವಸೂಲ್ ಮಾಸ್ ಸಿನಿಮಾ. ಮುಖ್ಯವಾಗಿ ಚಿತ್ರಕಥೆಯಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್.
Related Articles
Advertisement
ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇದೆ. ಸಾಮಾನ್ಯವಾಗಿ ಸೆಂಟಿಮೆಂಟ್ ಸಿನಿಮಾ ಎಂದರೆ ಅಲ್ಲೊಂ ದಿಷ್ಟು ಕಣ್ಣೀರ ಕಥೆಗಳಿ ರುತ್ತವೆ ಆದರೆ, ಈ ಚಿತ್ರ ಅದಕ್ಕೆ ತದ್ವಿರುದ್ಧ. ಇಲ್ಲಿ ಕಣ್ಣೀರ ಕಹಾನಿಯಿಲ್ಲ. ಆ ಮಟ್ಟಿಗೆ ಬೇರೆ ರೀತಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಉಳಿದಂತೆ ಹೆಚ್ಚು ಲಾಜಿಕ್ ಹುಡುಕದೇ ನೋಡಿದರೆ ಸಿನಿಮಾ ನಿಮಗೆ ಹೆಚ್ಚು ಇಷ್ಟವಾಗಬಹುದು. ಜೊತೆಗೆ ಮೌನಕ್ಕಿಂತ ಹೆಚ್ಚು ಮಾತು ಇಷ್ಟಪಡುವ ವರಿಗೆ “ಪೊಗರು’ ಒಳ್ಳೆಯ ಮಜ ಕೊಡಬಹುದು.
ನಿರ್ಮಾಪಕರು ಇಡೀ ಸಿನಿಮಾವನ್ನು ತುಂಬಾ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಫ್ರೆàಮ್‌ನಲ್ಲೂ ಸಾಕಷ್ಟು ಕಲಾವಿದರು, ಪ್ರಾಪರ್ಟಿಸ್… ಹೀಗೆ ಅದ್ಧೂರಿ ಮೇಕಿಂಗ್ ಮಾಡಲಾಗಿದೆ. ಸಿನಿಮಾ ಕ್ಲೈಮ್ಯಾಕ್ಸ್ ವೇಳೆಗೆ ಹೆಚ್ಚು ವೇಗ ಪಡೆದುಕೊಂಡು ಪಾತ್ರಗಳು ತುಂಬಾ ಬೇಗ ಬೇಗನೇ ಬದಲಾಗುತ್ತಾ ಹೋಗುತ್ತದೆ. ಇದರ ಬದಲು ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಟ್ರಿಮ್ ಮಾಡುವ ಜೊತೆಗೆ ಸೆಂಟಿಮೆಂಟ್ ದೃಶ್ಯಗಳನ್ನು ಬೆಳೆಸುವ ಅವಕಾಶ ನಿರ್ದೇಶಕರಿಗಿತ್ತು.
ಇಡೀ ಸಿನಿಮಾದ ಹೈಲೈಟ್ ಧ್ರುವ ಸರ್ಜಾ. ಚಿತ್ರವನ್ನು ತಮ್ಮ ಹೊತ್ತು ಸಾಗಿರುವ ಅವರು ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಹಿಂದಿ ಮೂರು ಸಿನಿಮಾಗಳಿಗಿಂತ ಅವರಿಗೆ ಕೊಂಚ ಭಿನ್ನ ಪಾತ್ರ ಸಿಕ್ಕಿದೆ. ಆ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಪಾತ್ರಕ್ಕಾಗಿ ಅವರು ಬದಲಾದ ರೀತಿಯೂ ಇಷ್ಟವಾಗುತ್ತದೆ. ಮುಖ್ಯವಾಗಿ ಆರಂಭದಿಂದ ಕೊನೆವರೆಗಿನ ಅವರ ಎನರ್ಜಿ ಇಷ್ಟವಾಗುತ್ತದೆ. ನಾಯಕಿ ರಶ್ಮಿಕಾಗೆ ಹೆಚ್ಚಿನ ಅವಕಾಶವಿಲ್ಲ ಮತ್ತು ಹೆಚ್ಚು ಮೋಡಿ ಮಾಡುವುದಿಲ್ಲ. ಉಳಿದಂತೆ ಸಂಪತ್, ರವಿಶಂಕರ್, ಪವಿತ್ರಾ ಲೋಕೇಶ್, ಧನಂಜಯ್, ಚಿಕ್ಕಣ್ಣ, ಮಯೂರಿ, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಂದನ್ ಶೆಟ್ಟಿಯ ಹಾಡುಗಳು ಮಾಸ್ ಪ್ರಿಯರ ಮನ ಗೆಲ್ಲುತ್ತವೆ.
ರವಿಪ್ರಕಾಶ್ ರೈ