Advertisement

ತಮಿಳಿನಲ್ಲೂ ತೆರೆಗೆ ಬರಲಿದೆ ಪೊಗರು

03:03 PM Dec 28, 2020 | Suhan S |

ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ.ಈಗಾಗಲೇ ಖರಾಬು ಸಾಂಗ್‌ ತೆಲುಗಿನಲ್ಲೂ ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರ ತಮಿಳಿನಲ್ಲೂ ತೆರೆಕಾಣುತ್ತಿದೆ. “ಸೆಮ್ಮ ತಮೀರು’ ಎಂಬ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Advertisement

ತಮಿಳು ಚಿತ್ರದ ಪೋಸ್ಟರ್‌ ಅನ್ನು ಧ್ರುವ ಸರ್ಜಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರ ಜನವರಿ ಮೂರನೇ ವಾರ ತೆರೆಕಾಣುವ ಸಾಧ್ಯತೆ ಇದೆ.

ಇದನ್ನೂ ಓದಿ : ಜ.1ಕ್ಕೆ ರಾಜತಂತ್ರ ತೆರೆಗೆ

ಡ್ಯಾನ್ಸ್‌ ಸುತ್ತ ಸಿನಿಮಾ :

ಸ್ಯಾಂಡಲ್‌ ವುಡ್‌ ನಲ್ಲಿ ಪ್ರಪ್ರಥಮ ಬಾರಿಗೆ ಡ್ಯಾನ್ಸ್ ಆಧಾರಿತ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದ್ದು, ಎಬಿಸಿಡಿ, ಸ್ಟ್ರೀಟ್‌ ಡ್ಯಾನ್ಸರ್‌ ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್‌ ನಟ ಸುಶಾಂತ್‌ ಪೂಜಾರಿ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ .ಎ. ಎಸ್‌.ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಕಿಶೋರ್‌ ಕುಮಾರ್‌ ಮತ್ತು ಸುಜಯ್‌ ಎಸ್‌. ಕಾಮತ್‌ ನಿರ್ದೇಶನವಿದೆ. ಕಿರಣ್‌ ಶೆಟ್ಟಿ, ಆಶಿಕಾ ಸುವರ್ಣ,ವಿನೋದ್‌ ಕುಮಾರ್‌ ಮತ್ತು ಶಿವರಾಜ್‌ ಮೊಗವೀರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಟೈಟಲ್‌ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರೀಕರಣದ ತಯಾರಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next