Advertisement
“ಪೊಗರು’ ರಿಲೀಸ್‌ಗೆ ತಯಾರಿ ಹೇಗಿದೆ?
Related Articles
Advertisement
“ಪೊಗರು’ ತೆರೆಹಿಂದಿನ ಅನುಭವ ಹೇಗಿತ್ತು?
ನಿಜಕ್ಕೂ ತುಂಬ ಚೆನ್ನಾಗಿತ್ತು. ಸುಮಾರು ಮೂರುವರೆ ವರ್ಷದ ಪರಿಶ್ರಮದಿಂದ ಈ ಸಿನಿಮಾ ಆಗಿದೆ. ನಮ್ಮ ಹೀರೋ ಧ್ರುವ ಸರ್ಜಾ, ಪ್ರೊಡ್ನೂಸರ್ ಗಂಗಾಧರ್ ಈ ಸಿನಿಮಾಕ್ಕೆ 2 ದೊಡ್ಡ ಪಿಲ್ಲರ್. ಇವರಿಬ್ಬರು ಇಲ್ಲದಿದ್ದರೆ, ಈ ಥರದ ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇವರ ಜೊತೆ ಸಿನಿಮಾದ ಪ್ರತಿ ಕಲಾವಿದರು, ತಂತ್ರಜ್ಞರು ಕೂಡ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಒಬ್ಬ ನಿರ್ದೇಶಕ ಅಂದು ಕೊಂಡಂತೆ ಸಿನಿಮಾ ಮಾಡೋದಕ್ಕೆ ಎಲ್ಲರ ಸಪೋರ್ಟ್ ತುಂಬ ಮುಖ್ಯ. ಇಲ್ಲಿಯವರೆಗೆ ನನ್ನ ಯಾವ ಸಿನಿಮಾಗಳು ಕೊಟ್ಟಿರದಂಥ ಅನುಭವವನ್ನ “ಪೊಗರು’ ಕೊಟ್ಟಿದೆ.
“ಪೊಗರು’ಇಷ್ಟು ಸಮಯ ಹಿಡಿಯಲು ಕಾರಣ?
ಈ ಸಿನಿಮಾ ಶುರು ಮಾಡುವ ಮೊದಲೇ ಇದಕ್ಕೆ ಅದರದ್ದೇ ಆದ ಒಂದಷ್ಟು ಸಮಯ ಹಿಡಿಯುತ್ತದೆ ಅಂತ ನಮಗೆ ಗೊತ್ತಿತ್ತು. ಯಾಕೆಂದ್ರೆ, ಮೂರು ಭಾಷೆಯಲ್ಲಿ ಸಿನಿಮಾ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದೆವು. ಸಿನಿಮಾದ ಕ್ಯಾರೆಕ್ಟರ್ ತಕ್ಕಂತೆ ಧ್ರುವ ತಮ್ಮ ದೇಹವನ್ನು ಬೇರೆ ಬೇರೆ ಥರ ಶೇಪ್ ಮಾಡಿಕೊಳ್ಳಬೇಕಾಗಿತ್ತು. ಅಲ್ಲದೆ ಬಿಗ್ ಕಾಸ್ಟಿಂಗ್ ಇತ್ತು. ಪ್ರೊಡಕ್ಷನ್ ಕೆಲಸಗಳು ತುಂಬ ಇದ್ದವು. ಹೀಗಾಗಿ ಒಂದಷ್ಟು ಸಮಯ ಹಿಡಿಯಿತು. ಇದರ ಮಧ್ಯೆ ಕೋವಿಡ್ ಬಂದಿದ್ದರಿಂದ ಒಂದಷ್ಟು ಸಮಯ ಏನೂ ಮಾಡಲಾಗಲಿದೆ.
ರಿಲೀಸ್‌ಗೂ ಮುನ್ನ ಹೇಗಿದೆ ರೆಸ್ಪಾನ್ಸ್?
ಆಡಿಯನ್ಸ್ ಮತ್ತು ಇಂಡಸ್ಟ್ರಿ ಕಡೆಯಿಂದ ಸಿನಿಮಾದ ಬಗ್ಗೆ ಒಳ್ಳೆಯ ಟಾಕ್ ಇದೆ. ಕೋವಿಡ್ ನಂತರ ರಿಲೀಸ್ ಆಗ್ತಿರುವ ಮೊದಲ ಬಿಗ್ ಬಜೆಟ್, ಬಿಗ್ ಸ್ಟಾರ್ ಸಿನಿಮಾ ಆಗಿರೋದ್ರಿಂದ, ಒಂದಷ್ಟು ಭಯ ಕೂಡ ಇದ್ದೇ ಇದೆ. ಥಿಯೇಟರ್‌ಗೆ ಬಂದು ಸಿನಿಮಾ ನೋಡುವ ಆಡಿಯನ್ಸ್ ಮನಸ್ಥಿತಿ ಈಗ ಹೇಗಿದೆ ಅಂತ ಗೊತ್ತಿಲ್ಲ. ಒಟ್ಟಾರೆ ಒಂದಷ್ಟು ರಿಸ್ಕ್ ತೆಗೆದುಕೊಂಡೇ ಸಿನಿಮಾ ರಿಲೀಸ್ ಮಾಡ್ತೀದ್ದೀವಿ
ಜಿ.ಎಸ್.ಕಾರ್ತಿಕ ಸುಧನ್