Advertisement
1 ಕಾವ್ಯ ಎಂಬುದು ರೂಪಕ ಪ್ರತಿಮೆ, ಧ್ವನಿಗಳ ವಾಚ್ಯವಲ್ಲದ ಪ್ರಕಾರ. ಅದು ಜನಸಾಮಾನ್ಯ ರಿಂದ ದೂರ. ಗದ್ಯ ವಾಚನದಿಂದ ಆಗುವಂಥ ತಕ್ಷಣದ ಪರಿಣಾಮ ಕಾವ್ಯ ವಾಚನದಿಂದ ಆಗದು ಅನಿಸ್ತದೆ. ಹೀಗಿರುವಾಗ ಕಾವ್ಯವಾಚನಕ್ಕೂ ಬಹುಮಾನ ಅನ್ನುವ ಯೋಜನೆಯ ಮುಖ್ಯ ಉದ್ದೇಶ ಏನು?
Related Articles
Advertisement
3 ನೀವು ತಂತ್ರಜ್ಞಾನ ನೋಡಿರುವವರು, ಜೊತೆಗೆ ಸಾಹಿತ್ಯವನ್ನೂ ಬಲ್ಲವರು! ಇವೆರಡನ್ನೂ ಒಟ್ಟಿಗೆ ಸೇರಿಸಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಿರುವಿರಿ. ಕವಿತೆಗಳಿಗೇ ಪ್ರಾಮುಖ್ಯತೆ ಕೊಡಬೇಕು ಅನ್ನಿಸಿದ್ದು ಯಾಕೆ?
ಕವಿತೆಯೂ ಸಾಹಿತ್ಯದ ಒಂದು ಮುಖ್ಯ ಪ್ರಕಾರ. ಕಳೆದ ತಿಂಗಳು ಕತೆಗಳದ್ದು ಮಾಡಿದ್ದೆವು. ಈ ಬಾರಿ ಕವಿತೆಗೆ ಪ್ರಾಮುಖ್ಯತೆ ಕೊಡಬೇಕು ಅನ್ನಿಸ್ತು. ಹಾಗಾಗಿ ಕವಿತೆಗೆ ಜಾಗ ಕೊಟ್ವಿ. “ಮೈಲ್ಯಾಂಗ್ ಆಡಿಯೋ’ದಲ್ಲಿ ಕತೆ, ಧಾರಾವಾಹಿ, ಕವಿತೆ, ಸ್ಟಾಂಡ್ ಅಪ್ ಕಾಮಿಡಿ, ಲೇಖನಗಳು ಸೇರಿದಂತೆ ಎಲ್ಲ ಬಗೆಯ ಕಂಟೆಂಟ್ ಅನ್ನು ಆಡಿಯೋದ ಮೂಲಕ ಜನರಿಗೆ ತಲುಪಿಸುವ ಆಯ್ಕೆಗಳಿವೆ.
4 ಹೆಚ್ಚು ಕ್ಲಿಕ್ ಲಿಸನ್ ಎಂಬುದನ್ನು ಆಧರಿಸಿ ತಾನೇ ಬಹುಮಾನ ಕೊಡೋದು? ಗಟ್ಟಿಯಿಲ್ಲದ ಕಾವ್ಯ, ಗಟ್ಟಿ ಕಾವ್ಯವನ್ನು ಹಿಂದಿಕ್ಕಿ ಜಾಸ್ತಿ ಕ್ಲಿಕ್ ಪಡೆದು, ಅದಕ್ಕೆ ಬಹುಮಾನ ಬಂದರೆ, ನೀವು ವಿಭಿನ್ನ ಪ್ರಯೋಗದಿಂದ ಏನು ಉಪಯೋಗ?
ಆನ್‌ಲೈನ್ ಜಗತ್ತಿನಲ್ಲಿ ಒಂದು ಬಲವಾದ ಸಾಹಿತ್ಯಿಕ ಸಮುದಾಯ ರೂಪುಗೊಳ್ಳಲು ಯಾವೆಲ್ಲ ಪ್ರಯೋಗಗಳು, ಸ್ಪರ್ಧೆಗಳು ನೆರವಾಗುವುದೋ ಅವುಗಳನ್ನು ಮಾಡಬೇಕೆಂಬುದು ನಮ್ಮ ನಿಲುವು. ಗುಣಮಟ್ಟದ ಪ್ರಶ್ನೆಯನ್ನು ನಾವು ಕೇಳುಗರ ತೀರ್ಮಾನಕ್ಕೆ ಬಿಡುತ್ತೇವೆ. ಯಾವುದೇ ವೇದಿಕೆ ಬೆಳೆಯುತ್ತ ಹೋದಂತೆ, ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿದಂತೆ ಗುಣಮಟ್ಟದ ಪ್ರಶ್ನೆ ತಾನೇ ತಾನಾಗಿ ತನ್ನ ಸ್ಥಾನ ಕಂಡುಕೊಳ್ಳುತ್ತದೆ. ಸಾಹಿತ್ಯಿಕ ಮೌಲ್ಯವುಳ್ಳ ಕತೆ, ಕವಿತೆಗಳನ್ನು ಉತ್ತೇಜಿಸುವ ಇನ್ನಷ್ಟು ಉಪಕ್ರಮಗಳನ್ನು ಮುಂಬರುವ ದಿನಗಳಲ್ಲಿ “ಮೈಲ್ಯಾಂಗ್ ಆಡಿಯೋ’ ಕೈಗೊಳ್ಳಲಿದೆ.
5″ಮೈಲ್ಯಾಂಗ್ ಬುಕ್ಸ್’ ಅಪ್ಲಿಕೇಶನ್ ಮತ್ತು ಆಡಿಯೋ ಅಪ್ಲಿಕೇಶನ್‌ನಿಂದ ಪ್ರಿಂಟ್ ಆದ ಪುಸ್ತಕ ಖರೀದಿ ಕಡಿಮೆ ಆಗಲ್ಲವಾ? ಪ್ರಿಂಟ್ ವರ್ಷನ್ ನಂಬಿದವರಿಗೆ ತೊಂದರೆ ಆಗಲ್ಲವಾ?
ಪ್ರಕಟಿತ ಪುಸ್ತಕಗಳನ್ನು ಓದುವ ಜನರೇ ಬೇರೆ. ಡಿಜಿಟಲ್ ಆವೃತ್ತಿಗಳ ಓದುಗರು/ ಕೇಳುಗರೇ ಬೇರೆ. ಹಾಗಾಗಿ, ಪ್ರಿಂಟ್ ಆಗುವ ಪುಸ್ತಕಗಳಿಗೆ ಡಿಜಿಟಲ್ ವ್ಯವಸ್ಥೆಯಿಂದ ಯಾವುದೇ ತೊಂದರೆಯೂ ಆಗುವುದಿಲ್ಲ. “ಮೈಲ್ಯಾಂಗ್ ಬುಕ್ಸ್’ನಲ್ಲಿ ಒಂದೂವರೆ ಲಕ್ಷದಷ್ಟು ಬಳಸುಗರು ಇದ್ದಾರೆ. ಕನ್ನಡ ಪುಸ್ತಕಗಳನ್ನು ಇ ಬುಕ್ ಮತ್ತು ಆಡಿಯೋ ಪುಸ್ತಕದ ರೂಪದಲ್ಲಿ ಕೊಂಡು ಓದುವ, ಕೇಳುವ ಆಯ್ಕೆಗಳಿವೆ. ಇದು 3 ವರ್ಷದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಕಾಶಕರಿಗೂ, ಲೇಖಕರಿಗೂ, ಓದುಗರಿಗೂ ಸಾಕಷ್ಟು ಅನುಕೂಲ ಕಲ್ಪಿಸಿದೆ. 3 ತಿಂಗಳ ಹಿಂದೆ ಶುರುವಾದ “ಮೈಲ್ಯಾಂಗ್ ಆಡಿಯೋ’ ಬರೆಯುವವರು ಮತು ವಾಚಿಸುವವರನ್ನು ಜೋಡಿಸುತ್ತ, ಆಡಿಯೋದ ಮೂಲಕ ಒಂದು ಗಟ್ಟಿಯಾದ ಸಮುದಾಯ ರೂಪಿಸುವ ಗುರಿ ಹೊಂದಿದೆ.
ಇದು ಮೊಬೈಲ್‌ಗಳ ಕಾಲ. ಎಲ್ಲರ ಜ್ಞಾನ ಮತ್ತು ಮನರಂಜನೆಯ ಬಹುತೇಕ ಅಗತ್ಯಗಳನ್ನು ಮೊಬೈಲ್ ಮತ್ತು ಇಂಟರ್‌ನೆಟ್ ಪೂರೈಸುತ್ತಿವೆ. ಈ ಚಲನೆ ಇನ್ನೆಂದೂ ಹಿಮ್ಮುಖವಾಗುವುದಿಲ್ಲ. ಹೀಗಿರುವಾಗ ಈ ಬದಲಾವಣೆಗೆ ಒಗ್ಗಿಕೊಂಡು ಸಾಹಿತ್ಯದ ಎಲ್ಲ ಪ್ರಕಾರಗಳ ಪ್ರಸಾರಕ್ಕೂ ಡಿಜಿಟಲ್ ಮಾಧ್ಯಮಗಳನ್ನೂ ಸೂಕ್ತವಾಗಿ ಬಳಸಿಕೊಂಡರೆ, ಒಂದಷ್ಟು ಹೊಸ ಓದುಗರನ್ನು ತಲುಪಲು ಸಾಧ್ಯವಿದೆ. ಇದು ಭಾಷೆಯ ಬೆಳವಣಿಗೆಗೂ ಪೂರಕವಾದ ಹೆಜ್ಜೆಯಾಗಲಿದೆ.
ವಾರದ ಅತಿಥಿ: ವಸಂತ ಶೆಟ್ಟಿ ಮುಖ್ಯಸ್ಥರು, ಮೈಲ್ಯಾಂಗ್ ಬುಕ್