ಧಾರವಾಡ: ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಕಾವ್ಯ ಲೋಕದ ಕಣಿ ಎನಿಸಿಕೊಂಡ ಹಿರಿಯ ಕವಿ ಡಾ.ವಿ.ಸಿ. ಐರಸಂಗ (91) ಅವರು ನಿಧನರಾದರು.
ತಮ್ಮ ಜೀವನದುದ್ದಕ್ಕೂ ಬಡತನ ಹೊದ್ದು ಬೆಳೆದ ಅವರು ಸೈಕಲ್ ಮೇಲೆಯೇ ಸುತ್ತಾಡುತ್ತಿದ್ದರು. 50 ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದ ಅವರ ಸಾಹಿತ್ಯ ಕೊಡುಗೆ ನೋಡಿ ಧಾರವಾಡದ ಕರ್ಣಾಟಕ ವಿಶ್ವವಿದ್ಯಾಲಯ, ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕೈ ಸೈಕಲ್ ಮೇಲೆ ಬಂದಿದ್ದರು. ಇವರನ್ನು ಜನರು ಸೈಕಲ್ ಕವಿ ಅಂತ ಕರೆಯುತ್ತಿದ್ದರು.
ಇದನ್ನೂ ಓದಿ:‘ಬೆಳಗಿ’ ಮುಳುಗಿದ ‘ರವಿ’: ಹಿರಿಯ ಪತ್ರಕರ್ತ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ!
ವಿ ಸಿ ಐರಸಂಗ ಅವರು ಮಗ, ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ 11.30 ಕೈ ಹೊಸ ಯಲ್ಲಾಪೂರ ರುದ್ರ ಭೂಮಿಯಲ್ಲಿ ಜರುಗಕಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ನಾಡೋಜ ಚೆನ್ನವೀರ ಕಣವಿ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.