ಉಡುಪಿ: ನವ್ಯಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದವನ್ನು ಮೊಗೇರಿ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ನಿರ್ಮಿಸಲಾದ ಕವಿ ಮುದ್ದಣನ ಸಾಹಿತ್ಯ ಗುರು ಬವಳಾಡಿ ವೆಂಕಟರಮಣ ಹೆಬ್ಟಾರ್ ವೇದಿಕೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು, ಒಂದೇ ಕವಲಿನಿಂದ ಬಂದ ಮೂಕಾಂಬಿಕೆಯಮ್ಮ, ಗೋಪಾಲಕೃಷ್ಣ ಅಡಿಗ, ಬಿ.ಎಚ್.ಶ್ರೀಧರ್ ಅವರ ಹೆಸರುಗಳನ್ನು ಹೊಂದಿದ ಮೂಗೋಶ್ರೀ ವೇದಿಕೆ ಸಮಾರಂಭವನ್ನು ಆಯೋಜಿಸುತ್ತಿರುವುದು ಸ್ತುತ್ಯರ್ಹ. ಹಳೆಯ ಬೇರುಗಳನ್ನು ಯುವಕರಾದ ಚಿಗುರಿನವರು ಆಯೋಜಿಸುವುದೂ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ನ್ಯಾಯವಾದಿ ಎ.ಎಸ್.ಎನ್.ಹೆಬ್ಟಾರ್ ಅವರು, ಗೋಪಾಲಕೃಷ್ಣ ಅಡಿಗರು ಅಧ್ಯಕ್ಷತೆಯನ್ನು ವಹಿಸಿಕೊಂಡ ಧರ್ಮಸ್ಥಳ ದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕುಂದಾಪುರದಿಂದ ತಂಡವನ್ನು ಕಟ್ಟಿಕೊಂಡು ಹೋದ ಸನ್ನಿವೇಶವನ್ನು ಸ್ಮರಿಸಿಕೊಂಡರು.
ಅಮೆರಿಕ ಅಮೆರಿಕ ಸಿನೆಮಾದಲ್ಲಿ “ಯಾವ ಮೋಹನ ಮುರಳಿ ಕರೆಯಿತೋ’ ಹಾಡು ಬಂದ ಬಳಿಕ ಈ ಹಾಡು ಜನಪ್ರಿಯಗೊಂಡಿತು ಎಂಬುದನ್ನು ಖಂಬದಕೋಣೆ ಪ್ರಕಾಶ್ ರಾವ್ ಹೇಳಿದರು. ಬಸೂರು ವಿ| ಮಾಧವ ಅಡಿಗ, ಮಹಾಬಲೇಶ್ವರದ ಸದಾಶಿವ ಉಡುಪ, ಜನಾರ್ದನ ಮರವಂತೆ, ಬೆಂಗಳೂರಿನ ಡಾ| ಎಸ್.ಎಲ್. ಮಂಜುನಾಥ, ಕೆ. ಸೂರ್ಯನಾರಾಯಣ ಅಡಿಗ, ಮಹಾಬಲೇಶ್ವರ ಅಡಿಗ, ಕೆ. ಪಾರ್ವತಿ ಉಡುಪ, ಗುಜ್ಜಾಡಿ ನಾಗರಾಜ ಕೊಡಂಚ, ಹಿರಿಯ ಪತ್ರಕರ್ತ ಎಂ.ಜಯರಾಮ ಅಡಿಗ ಮುಖ್ಯ ಅತಿಥಿಗಳಾಗಿದ್ದರು.
ಪಾರ್ವತಿ ಉಡುಪರ “ಮೊಗೇರಿ ಮುಖಪುರ’, ಅಶೋಕ್ ಕುಮಾರ್ ಹೆಗ್ಡೆಯವರ “ಕವನ ಕನ್ನಡಿ’ ಕವನ ಸಂಕಲನ, ಎಂ.ಜನಾರ್ದನ ಅಡಿಗರ “ಮೊಗೇರಿಯ ಚಿಗುರು’ ಕವನ ಸಂಕಲನವನ್ನು ಹಿರಿಯರಾದ ವೇ|ಮೂ| ಎಂ. ಶಂಕರನಾರಾಯಣ ಅಡಿಗರು ಬಿಡುಗಡೆಗೊಳಿಸಿದರು. ಚಂದ್ರಶೇಖರ ಹೊಳ್ಳ, ವರ ಮಹಾಲಕ್ಷ್ಮೀ ಹೊಳ್ಳರನ್ನು ಸಮ್ಮಾನಿಸ ಲಾಯಿತು. ಮೂಗೋಶ್ರೀ ಅಧ್ಯಯನ ಪ್ರಬಂಧವನ್ನು ಉಪ್ಪುಂದ ರಮೇಶ ವೈದ್ಯ ಮಂಡಿಸಿದರು. ಗಣೇಶ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರ್ವಹಿಸಿ, ವೇದಿಕೆ ಪ್ರವರ್ತಕ ಎಂ.ಜನಾರ್ದನ ಅಡಿಗ ಸ್ವಾಗತ ಕವನ ವಾಚಿಸಿದರು. ಶಿಕ್ಷಕ ಗಣೇಶ ಪೂಜಾರಿ ವಂದಿಸಿದರು.
ಯುವ ಕವಿಗೋಷ್ಠಿ ಮತ್ತು ಊರ ಹಿರಿಯರ ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಕಾತ್ಯಾಯಿನಿ ಕುಂಜಿಬೆಟ್ಟು ವಹಿಸಿದ್ದರು. ರವೀಂದ್ರ ಹೆಬ್ಟಾರ್ ಬವಳಾಡಿ ಹಿರಿಯರನ್ನು ಸ್ಮರಿಸಿದರು. ಬಳ್ಕೂರು ಭಾಸ್ಕರ ಉಡುಪ, ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಬೆಂಗಳೂರಿನ ಕೃಷ್ಣಮೂರ್ತಿ ಅಡಿಗ, ಅಶೋಕ ಹೆಗ್ಡೆ, ಅಶ್ರಫ್ ಸುಲೇಮಾನ್, ಕುಂಚೇಶಿ ಕೃಷ್ಣಗೋಪಾಲ ಹೆಬ್ಟಾರ್, ಬವಳಾಡಿ ರಾಧಾಕೃಷ್ಣ ಹೆಬ್ಟಾರ್ ಅತಿಥಿಗಳಾಗಿದ್ದರು. ಕವಿಗಳಾದ ಪಡುಕೋಣೆ ಪ್ರಕಾಶ್ ಹೆಬ್ಟಾರ್, ಕನಕಪುರದ ವಿಕ್ರಮ ಉಡುಪ, ಚಂದ್ರ ಹೆಮ್ಮಾಡಿ, ಕಮಲಶಿಲೆಯ ಪೂರ್ಣಿಮಾ ಭಟ್, ಮೊಗೇರಿ ಶೇಖರ ದೇವಾಡಿಗ, ಮಂದಾರ್ತಿಯ ವಿಶ್ವಜಿತ್, ನಾಯ್ಕನಕಟ್ಟೆ ಪುಂಡಲೀಕ ನಾಯಕ್, ಕುಂದಾಪುರದ ಸುಮಿತ್ರಾ ಐತಾಳ್, ಮುಳ್ಳಕಟ್ಟೆ ಜಗದೀಶ ಕವನ ವಾಚಿಸಿದರು. ಶಿಕ್ಷಕ ರಘು ಪೂಜಾರಿ ವಂದಿಸಿದರು.