Advertisement
1927ರಲ್ಲಿ ಶೇಠ್ ಆನಂದಿಲಾಲ್ ಪೋದಾರ್ ಅವರಿಂದ ಪೋದಾರ್ ಎಜ್ಯುಕೇಶನ್ ಗ್ರೂಪ್‌ನಿಂದ ಚಾಲನೆ ಪಡೆದ ಪೋದಾರ್ ಎಜ್ಯುಕೇಶನ್ ನೆಟ್ವರ್ಕ್ ಇಂದು 136ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದೆ ಹಾಗೂ 98ಕ್ಕೂ ಹೆಚ್ಚು ಪೋದಾರ್ ಸಹಭಾಗಿತ್ವದ ಶಾಲೆಗಳಿವೆ. ಈವರೆಗೆ 1.90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಆನಂದಿಲಾಲ್ ಪೋದಾರ್ ಟ್ರಸ್ಟ್‌ನ ಪ್ರಥಮ ಅಧ್ಯಕ್ಷರಾಗಿದ್ದರು ಎನ್ನುವುದು ಉಲ್ಲೇಖನೀಯ. ಪರಂಪರೆ, ನಂಬಿಕೆ, ಶ್ರದ್ಧೆ, ಪ್ರಮಾಣಿಕತೆ, ಭಾವೈಕ್ಯ ಮತ್ತು ಸೇವೆಯಂತಹ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶ್ರಮಿಸುತ್ತಿದೆ. ಶಿಕ್ಷಣ, ಕ್ರೀಡೆ, ನೈತಿಕತೆ, ತಾಂತ್ರಿಕ ಪರಿಣಿತಿ ಸಹಿತ ಎಲ್ಲ ಜ್ಞಾನವನ್ನೂ ಧಾರೆ ಎರೆದು ಭವಿಷ್ಯದ ಜಾಗತಿಕ ನಾಯಕರನ್ನು ರೂಪಿಸುವ ಪ್ರಯತ್ನ ನಿರಂತರವಾಗಿರುತ್ತದೆ.
Related Articles
Advertisement
ಧಾರವಾಡ ಲಯನ್ಸ್ ಸ್ಕೂಲ್ ಆಡಳಿತವನ್ನೂ ತೆಕ್ಕೆಗೆ ತೆಗೆದುಕೊಂಡರು. 2020 ರಲ್ಲಿ ಪಾಲಾಕ್ಷ್ ಪೋದಾರ್ ಲರ್ನ್ ಸ್ಕೂಲ್ ಜೀವ ತಳೆಯಿತು.
ವೈಶಿಷ್ಟ್ಯಗಳ ಆಗರಸುಸಜ್ಜಿತ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ತಾಂತ್ರಿಕವಾಗಿ ಶ್ರೀಮಂತವಾಗಿ ಸ್ಮಾರ್ಟ್ ಎನಿಸಿಕೊಂಡಿವೆ. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಿಸಿ ಟಿವಿ ನಿಗಾ (ಈ ಸುರಕ್ಷತಾ ಕ್ರಮವನ್ನು ಬಸ್‌ಗಳಲ್ಲೂ ಅಳವಡಿಸಲಾಗಿದೆ), ಆರೋಗ್ಯಕರ ಆಹಾರವನ್ನು ಒದಗಿಸಲು ಕ್ಯಾಂಪಸ್ ಒಳಗೆ ಕೆಫೆಟೀರಿಯಾ ಸೌಲಭ್ಯ(ಒಬ್ಬ ಆಹಾರ ತಜ್ಞರ ಮಾರ್ಗದರ್ಶನವೂ ಲಭ್ಯ). ಅಥ್ಲೆಟಿಕ್ಸ್, ಫುಟ್‌ಬಾಲ್, ಲಾನ್ ಟೆನಿಸ್, ಸ್ಕೇಟಿಂಗ್, ಕ್ರಿಕೆಟ್ ಮತ್ತಿತರೆ ಆಟಗಳನ್ನು ಆಡಲು ಕ್ರೀಡಾ ಸೌಕರ್ಯಗಳನ್ನು ಒದಗಿಸಲಾಗಿದೆ. ಕಲೆ, ಸಂಗೀತ, ನೃತ್ಯ, ಝುಂಬಾ, ಯೋಗ, ಹೂದೋಟ ನಿರ್ಮಾಣಕ್ಕೂ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಫ್ರೆಂಚ್ ಭಾಷೆಯನ್ನೂ ಕಲಿಸಲಾಗುತ್ತಿದೆ. ಆಧುನಿಕ ಸೌಲಭ್ಯಗಳಿರುವ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳು ಕಲಿಕೆಗೆ ಅನುಕೂಲ ಕಲ್ಪಿಸುತ್ತಿವೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಲಿ, ಸಂತೋಷದಿಂದ ಕಲಿಯಲು ಎಲ್ಲ ವಕಾಶಗಳು ಇಲ್ಲಿವೆ. ಅನ್ವೇಷಣೆ, ಅನುಭವ ಮತ್ತು ಅನುಷ್ಠಾನ ಈ ಮುರು ಮಾದರಿಗಳಲ್ಲಿ ಕಲಿಕೆಯು ಇಲ್ಲಿ ಪರಿಪೂರ್ಣವಾಗುತ್ತಿದೆ.
– ಸುಸಜ್ಜಿತ ಪ್ರಯೋಗಾಲಯಗಳು
– ಟೆಕ್-ಫ್ರಂಡ್ಲಿ ಸ್ಮಾರ್ಟ್ ತರಗತಿ ಕೊಠಡಿಗಳು
– ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ.
– ಉದ್ಯಮದಲ್ಲಿ ಅತ್ಯುತ್ತಮ ಶಿಕ್ಷಕರು, ನಿಯಮಿತವಾದ ತರಬೇತಿಗಳು
– ಶಾಲಾ ಆವರಣದಲ್ಲಿ 24×7 ಸಿಸಿ ಕ್ಯಾಮರಾ ಕಣ್ಗಾವಲು.
– ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾ ಆರೋಗ್ಯಕರ ಆಹಾರ ನೀಡುತ್ತಿದೆ
– ನ್ಪೋರ್ಟ್ಸ್ ಕ್ಲಬ್, ಹವ್ಯಾಸ ತರಗತಿಗಳು ಮತ್ತು ಇನ್ನೂ ಅನೇಕ.
– ವಿದೇಶಿ ಭಾಷೆಯ ಪರಿಚಯ- 1ರಿಂದ 5ನೇ ತರಗತಿಗಳಿಗೆ ಫ್ರೆಂಚ್.