Advertisement

ಪೊದಾರ್‌ ಇಂಟರ್‌ನ್ಯಾಶನಲ್‌ ಶಾಲಾ ಕಟ್ಟಡ ಉದ್ಘಾಟನೆ

03:35 AM Jun 29, 2017 | Team Udayavani |

ಉಡುಪಿ: ಮಣಿಪಾಲ ಪೆರಂಪಳ್ಳಿ ಪರಿಸರದಲ್ಲಿ ನಿರ್ಮಾಣವಾದ ಪೊದಾರ್‌ ಇಂಟರ್‌ನ್ಯಾಶನಲ್‌ ಶಾಲಾ ಕಟ್ಟಡವು ಜೂ. 28ರಂದು ಉದ್ಘಾಟನೆಗೊಂಡಿತು. ಶಾಲಾ ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಶಾಲೆಯ ಕೀರ್ತಿ ಎಂತಹ ವಿದ್ಯಾಸಂಸ್ಥೆಯನ್ನು ಎತ್ತರಕ್ಕೆ ಕೊಂಡುಹೋಗುತ್ತದೆ. ಸುಂದರ ಪರಿಸರ, ಸ್ವತ್ಛ ಪರಿಸರ ಮಕ್ಕಳಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ಕಟ್ಟಡವನ್ನು ಉದ್ಘಾಟಿಸಿದ ರಾಜೀವ್‌ ಗಾಂಧಿ ಯುನಿವರ್ಸಿಟಿ ಆಫ್ ಅಲೈಡ್‌ ಸೈನ್ಸ್‌ ನ ಸೆನೆಟ್‌ ಸದಸ್ಯ ಡಾ| ಇಫ್ತಿಕರ್‌ ಹೇಳಿದರು.

Advertisement

ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ  ನಿಗಮದ ಅಧ್ಯಕ್ಷ ಎಂ. ಎ. ಗಫ‌ೂರ್‌, ಕರ್ನಾಟಕ ಪಂಚಾಯತ್‌ರಾಜ್‌ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಕೆಎಸ್‌ಎ ಅಲ್‌ ಮುಜೈನ್‌ ಝಕೀರಾ ಜೋಕಟ್ಟೆ , ವೈಟ್‌ ಸ್ಟೋನ್‌ ಗ್ರೂಪ್‌ನ ಅಧ್ಯಕ್ಷ ಮೊಹಮ್ಮದ್‌ ಷರೀಫ್, ಉಡುಪಿ ನಗರಸಭಾ ಸದಸ್ಯ ಪ್ರಶಾಂತ್‌ ಭಟ್‌, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವೈಯೋಲೆಟ್‌ ಫೆಲಿಕ್ಸ್‌ ಡಿ’ಸೋಜ, ಕಟ್ಟಡದ ಮಾಲಕರಾದ ಶಾಹಿದ್‌ ಹಸ್ಸನ್‌ ಮತ್ತು ಮೊಹ್ಮದ್‌ ಹಬೀಮ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟ್ಟಡದ ಕಾಂಟ್ರ್ಯಾಕ್ಟರ್‌ ನಿತಿನ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶಾಲೆಯ ಪ್ರಾಂಶುಪಾಲ ಜಾರ್ಜ್‌ ಕುರಿಯನ್‌ ಸ್ವಾಗತಿಸಿ, ಶಹೀದ್‌ ಹಸ್ಸನ್‌ ವಂದಿಸಿದರು. ಶಿಕ್ಷಕಿ ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next