Advertisement

ಪೋಡ್‌ ಟ್ಯಾಕ್ಸಿ ಓಡಿ ಬಂದಿತ್ತಾ…ಬೆಂಗ್ಳೂರು ಇನ್ನು ಫ‌ುಲ್‌ ಝೂಮ್‌!

04:10 PM May 20, 2017 | Team Udayavani |

 ಟ್ರಾಫಿಕ್‌ ತಲೆನೋವಿನಿಂದ ತಪ್ಪಿಸಿಕೊಳ್ಳಲು ಹಲವು ಮಾರ್ಗಗಳು ಸೃಷ್ಟಿ ಆಗುತ್ತಿವೆ. ಮೆಟ್ರೋದಲ್ಲಿ ಬಿಂದಾಸ್‌ ಆಗಿ ಬೆಂಗ್ಳೂರು ಸುತ್ತಿದ್ದು ಆಯ್ತು. ಈ ಮಾಯಾನಗರಿಗೆ ಈಗ ಪೋಡ್‌ ಟ್ಯಾಕ್ಸಿ ದಾಂಗುಡಿ ಇಡುತ್ತಿದೆ. ಬಿಬಿಎಂಪಿಯು ಪೋಡ್‌ ಸಂಚಾರ ವ್ಯವಸ್ಥೆಗೆ ಟೆಂಡರ್‌ ಕರೆದಿದ್ದು, ಬಹುಶಃ 2018ರಲ್ಲಿ ಆಕಾಶಕ್ಕೆ ಜೋತು ಬಿದ್ದು ಜುಮ್ಮನೆ ಸಾಗುವ ಭಾಗ್ಯ ನಮಗೆ ದಕ್ಕಬಹುದು. ಪೋಡ್‌ ಕಾರಿನ ಸುತ್ತಮುತ್ತ ಒಂದು ಕೌತುಕ ನೋಟ ನಿಮ್ಮ ಮುಂದಿದೆ…

Advertisement

ಏನಿದು ಪೋಡ್‌ ಕಾರು?
ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಸ್ಟ್‌ ಅಥವಾ ಪೋಡ್‌ ಟ್ಯಾಕ್ಸಿ ಎಂಬುದು ತ್ವರಿತ, ಸುಲಭ ಸಾರಿಗೆ. ಮುಂದಿನ ತಲೆಮಾರಿನ ಸಂಚಾರ ವ್ಯವಸ್ಥೆ ಅಂತಲೇ ಕರೆಯಲ್ಪಟ್ಟಿದೆ. ವಿದ್ಯುತ್‌, ಬ್ಯಾಟರಿ ಆಧಾರಿತ ಸಾರಿಗೆ ಇದು. ಕೇಬಲ್‌ ಕಾರಿನ ಮಾದರಿಯ ಓಡಾಟ. ಇದಕ್ಕೆ ಡ್ರೈವರ್‌ ಇರುವುದಿಲ್ಲ. ಕಂಪ್ಯೂಟರೀಕೃತ ವ್ಯವಸ್ಥೆಯಿಂದ ಇದನ್ನು ಕಂಟ್ರೋಲ್‌ ಮಾಡಲಾಗುತ್ತದೆ.

ಬೆಂಗ್ಳೂರು ಪೋಡ್‌ನ‌ ಸ್ಪೆಷಾಲಿಟಿ
– ಇದು ಪಕ್ಕಾ ಪರಿಸರಸ್ನೇಹಿ. ಸೋಲರ್‌ ಆಧಾರಿತ ಪೋಡ್‌ ವ್ಯವಸ್ಥೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ.
– 1 ತಾಸಿಗೆ 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತೆ.
– ಸುರಂಗ ಇಲ್ಲವೇ ಎಲವೇಟೆಡ್‌ ಮಾರ್ಗಗಳಲ್ಲಿ ಸಂಚಾರ. 
– ಮೆಟ್ರೋ ಅಡಿಯಲ್ಲೂ ಸಂಚಾರ ವ್ಯವಸ್ಥೆಗೆ ಪ್ಲ್ರಾನ್‌.
– ಇವಕ್ಕಾಗಿಯೇ ಪ್ರತ್ಯೇಕ ನಿಲ್ದಾಣಗಳನ್ನು ರಚಿಸಲಾಗುತ್ತದೆ.

ಏನು ಲಾಭ?
– ಒಂದು ಪೋಡ್‌ ಟ್ಯಾಕ್ಸಿಯಲ್ಲಿ 4- 6 ಮಂದಿಗೆ ಅವಕಾಶ.
– ನಗರಾದ್ಯಂತ ಒಂದು ತಾಸಿನಲ್ಲಿ 15 ಸಾವಿರ ಮಂದಿ ಪಯಣಿಸಬಹುದು.
– ಮೆಟ್ರೋ ಇಲ್ಲದ ಜಾಗದಲ್ಲೂ ಪೋಡ್‌ ಸಂಚರಿಸುತ್ತೆ.
– ರಸ್ತೆ ಅಗಲೀಕರಣ ಸಾಧ್ಯವೇ ಇಲ್ಲ ಎನ್ನುವಂಥ ಪ್ರದೇಶದಲ್ಲೂ ಪೋಡ್‌ ಓಡುತ್ತೆ.
– ಮೆಟ್ರೋ ಬಂದರೂ ಟ್ರಾಫಿಕ್‌ ತಗ್ಗಲಿಲ್ಲ ಎನ್ನುವ ತಲೆನೋವು ಕೊಂಚ ಕಡಿಮೆ ಆಗುತ್ತೆ.
– ಮೆಟ್ರೋ ಮಾರ್ಗ ಪ್ರತಿ ಕಿ.ಮೀ.ಗೆ 320 ಕೋಟಿ ರೂ. ತಗುಲಿದರೆ, ಪೋಡ್‌ ಟ್ಯಾಕ್ಸಿ ಮಾರ್ಗಕ್ಕೆ ಕಿ.ಮೀ.ಗೆ 50 ಕೋಟಿ ರೂ. ಸಾಕು!

ಮೆಟ್ರೋಗಿಂತ ಸ್ಪೀಡು!
“ನಮ್ಮ ಮೆಟ್ರೋ’ ರೈಲುಗಳು ಗಂಟೆಗೆ 90 ಕಿ.ಮೀ. ವೇಗದ ಮಿತಿಯನ್ನು ಹೊಂದಿದ್ದರೂ, 40- 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಆದರೆ, ಪೋಡ್‌ ಟ್ಯಾಕ್ಸಿ ಇಷ್ಟು ಮಂದ ವೇಗ ಹೊಂದಿಲ್ಲ. ಗರಿಷ್ಠ 100 ಕಿ.ಮೀ. ವೇಗದ ಮಿತಿ ಹೊಂದಿದ್ದರೂ, ಗಂಟೆಗೆ 70 ಕಿ.ಮೀ. ವೇಗವನ್ನು ಅವು ತಲುಪಲೇಬೇಕು. 

Advertisement

ಪೋಡ್‌ ಒಳಗೆ ಏನಿರುತ್ತೆ?
– ವಿಡಿಯೋ ಮಾನಿಟರಿಂಗ್‌ ವ್ಯವಸ್ಥೆ
– ಮೆಟ್ರೋದಲ್ಲಿ ಇರುವ ಹಾಗೆಯೇ ಅನೌನ್ಸ್‌ಮೆಂಟ್‌ ವ್ಯವಸ್ಥೆ ಇರುತ್ತೆ.
– ಟಚ್‌ಸ್ಕ್ರೀನ್‌ನಲ್ಲಿ ಪಯಣಿಗ, ತಾನು ಹೋಗಬೇಕಾದ ಸ್ಥಳವನ್ನು ಕ್ಲಿಕ್ಕಿಸಬೇಕು.
– ಹವಾನಿಯಂತ್ರಿತ ಕೊಠಡಿ.
– ಕುಳಿತುಕೊಳ್ಳಲು, ನಿಲ್ಲಲೂ ವ್ಯವಸ್ಥೆ ಇರುತ್ತೆ.

ದಾರಿ ಯಾವುದಯ್ಯ?
ಎಂ.ಜಿ. ರಸ್ತೆ ಮೆಟ್ರೋ ಸ್ಟೇಶನ್‌- ಲೀಲಾ ಪ್ಯಾಲೇಸ್‌ (4 ಕಿ.ಮೀ.), ಲೀಲಾ ಪ್ಯಾಲೇಸ್‌- ಮಾರತ್‌ಹಳ್ಳಿ (6 ಕಿ.ಮೀ.), ಮಾರತ್‌ಹಳ್ಳಿ ಜಂಕ್ಷನ್‌- ಇಪಿಐಪಿ ಜಂಕ್ಷನ್‌ (6 ಕಿ.ಮೀ.), ಎಂ.ಜಿ. ರಸ್ತೆ ಮೆಟ್ರೋ ಸ್ಟೇಶನ್‌- ಕೋರಮಂಗಲ (7.ಕಿ.ಮೀ.), ಜಯನಗರ 4ನೇ ಬ್ಲಾಕ್‌- ಜೆ.ಪಿ. ನಗರ 6ನೇ ಫೇಸ್‌ (5.3 ಕಿ.ಮೀ.), ಸೋನಿ ಜಂಕ್ಷನ್‌- ಇಂದಿರಾನಗರ್‌ ಮೆಟ್ರೋ ಸ್ಟೇಶನ್‌ (6.7 ಕಿ.ಮೀ)

6- ಗರಿಷ್ಠ ಇಷ್ಟು ಜನರಿಗೆ ಅವಕಾಶ
50- ಒಂದು ಕಿ.ಮೀ. ಪೋಡ್‌ ಮಾರ್ಗಕ್ಕೆ ಇಷ್ಟು ಕೋಟಿ ಸಾಕು
100ಧಿ- ಒಂದು ತಾಸಿನಲ್ಲಿ ಇದರ ವೇಗಮಿತಿ
15,000- ನಗರಾದ್ಯಂತ ಇಷ್ಟು ಜನ 1 ತಾಸಿನಲ್ಲಿ ಪಯಣ

 ವಸಂತಕುಮಾರ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next