Advertisement

Pocso: ಬಾಲಕಿಯ ಅತ್ಯಾಚಾರ, ಕೊಲೆ: 61 ದಿನಗಳಲ್ಲೇ ಗಲ್ಲು ವಿಧಿಸಿದ ಕೋರ್ಟ್‌

01:56 AM Dec 07, 2024 | Team Udayavani |

ಕೋಲ್ಕತಾ: 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ 19 ವರ್ಷದ ಯುವಕನಿಗೆ ಅಪರಾಧ ನಡೆದ ಕೇವಲ 61 ದಿನಗಳಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರ್‌ ಪೋಕ್ಸೋ ಕೋರ್ಟ್‌ ಮರಣದಂಡನೆ ವಿಧಿಸಿದೆ.

Advertisement

24 ಪರಗಣ ಜಿಲ್ಲೆಯ ಜಯನಗರದಲ್ಲಿ ಅ.4ರಂದು ಟ್ಯೂಶನ್‌ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯ ಮೇಲೆ ಮುಸ್ತಾಕೀನ್‌ ಸರ್ದಾರ್‌ ಎಂಬಾತ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಆತನನ್ನು ಕೇವಲ 2.5 ಗಂಟೆಗಳಲ್ಲಿ ಬಂಧಿಸಿದ್ದ ಪೊಲೀಸರು 25 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ, ಅ.30ರಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಬಳಿಕ ವಿಚಾರಣೆ ಆರಂಭಿಸಿದ್ದ ಕೋರ್ಟ್‌, ಆರೋಪಿಗೆ ಮರಣದಂಡನೆಯೊಂದಿಗೆ, ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಕೋಲ್ಕತಾದ ಟ್ರೈನಿ ವೈದ್ಯೆ ಅತ್ಯಾಚಾರ ವಿರೋಧಿ ಪ್ರತಿಭಟನೆಗಳ ನಡುವೆಯೇ ನಡೆದಿದ್ದ ಈ ಘಟನೆಯು ರಾಜ್ಯವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next