Advertisement

POCSO Act: 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ; ತಂದೆ, ಮಗ ಸೆರೆ

11:10 AM Aug 16, 2023 | Team Udayavani |

ಬೆಂಗಳೂರು: ಐದು ವರ್ಷ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಂದೆ, ಮಗನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Advertisement

ಸುಂಕದಕಟ್ಟೆಯ ಚಂದನ ಲೇ ಔಟ್‌ ನಿವಾಸಿ ನಾಗರಾಜು ಮತ್ತು ಆತನ 17 ವರ್ಷದ ಪುತ್ರ ನನ್ನು ಬಂಧಿ ಸಲಾಗಿದೆ. ಆರೋಪಿ ಗಳ ವಿರುದ್ಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ನಾಗರಾಜ್‌ ಕ್ರಷರ್‌ವೊಂದರಲ್ಲಿ ಸೂಪರ್‌ವೈಸರ್‌ ಆಗಿದ್ದು, ಆತನ ಅಪ್ರಾಪ್ತ ಪುತ್ರ ಕಾಲೇಜೊಂದರಲ್ಲಿ ಪ್ರಥಮ ಪಿಯು ಓದುತ್ತಿದ್ದಾನೆ. ಅಲ್ಲದೆ, ಸಂತ್ರಸ್ತೆ ತಾಯಿ ಆರೋಪಿಗಳಿಗೆ ಸಂಬಂಧಿಕರಾಗಿದ್ದಾರೆ. ಹೀಗಾಗಿ ಮಗುವಿನ ತಾಯಿ ಕೆಲಸಕ್ಕೆ ತೆರಳುವಾಗ ಆರೋಪಿ ನಾಗರಾಜ್‌ ಮನೆಗೆ ಮಗಳನ್ನು ಬಿಟ್ಟು ಹೋಗುತ್ತಿದ್ದರು. ಈ ವೇಳೆ ಆರೋಪಿಗಳು ದೌರ್ಜನ್ಯ ಎಸಗಿ ದ್ದಾರೆ. ಇತ್ತೀಚೆಗೆ ಬಾಲಕಿಯ ವರ್ತ ನೆಯಲ್ಲಿ ಬದಲಾವಣೆ ಆಗಿತ್ತು. ಅದನ್ನು ಗಮನಿಸಿದ ತಾಯಿ ಮಗಳ ಬಳಿ ಪ್ರಶ್ನಿಸಿದಾಗ, ಆರೋಪಿಗಳ ದೌರ್ಜನ್ಯದ ಬಗ್ಗೆ ಮಗು ವಿವರಿ ಸಿತ್ತು. ಬಳಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯ ಕೀಯ ಪರೀಕ್ಷಿಸಿದಾಗಲೂ ದೌರ್ಜನ್ಯ ನಡೆದಿರುವುದು ಖಾತ್ರಿ ಯಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ತಾಯಿ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next