Advertisement
ಈಗ ಕಂಪೆನಿ, ಮಿಡಲ್ ರೇಂಜಿನ ಮೊಬೈಲೊಂದನ್ನು ಕೆಲ ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ “ಪೋಕೋ ಎಕ್ಸ್ 2′. ಅದರಲ್ಲಿ ಮೂರು ಮಾದರಿಗಳಿವೆ. ಬೆಲೆ, 16 ಸಾವಿರ ರೂ.ಗಳಿಂದ ಆರಂಭವಾಗಿ 20 ಸಾವಿರದವರೆಗೂ ನಿಗದಿಪಡಿಸಲಾಗಿದೆ. ಈ ಫೋನ್‌ನಲ್ಲಿರುವ ಸ್ಪೆಸಿಫಿಕೇಷನ್ ಆ ದರಕ್ಕೆ ಹೋಲಿಸಿದರೆ ಚೆನ್ನಾಗಿವೆ. ಈ ಮಾಡೆಲ್ ಚೀನಾದಲ್ಲಿ ರೆಡ್‌ಮಿ ಕೆ30 ಹೆಸರಿನಲ್ಲಿ ಮಾರಾಟವಾಗುತ್ತಿದೆ. ಅದೇ ಫೋನನ್ನು ಪೋಕೋ ಎಕ್ಸ್2 ಎಂದು ಮರುನಾಮಕರಣ ಮಾಡಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
Related Articles
Advertisement
ಕ್ಯಾಮರಾ ಆಕರ್ಷಣೆ : ಹಿಂಬದಿಯಲ್ಲಿ ನಾಲ್ಕು ಕ್ಯಾಮರಾಗಳನ್ನು ಈ ಫೋನ್ ಹೊಂದಿದೆ. 64 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 686 ಹೊಸ ಮಸೂರ (ಲೆನ್ಸ್)ವನ್ನು ಮುಖ್ಯ ಕ್ಯಾಮರಾಕ್ಕೆ ಅಳವಡಿಸಲಾಗಿದೆ. 8 ಮೆಗಾಪಿಕ್ಸೆಲ್ ವಿಸ್ತೃತ ಕೋನ ಮಸೂರ (ವೈಡ್ ಆ್ಯಂಗಲ್ ಲೆನ್ಸ್) 2 ಮೆ.ಪಿ. ಸೂಕ್ಷ್ಮ ಮಸೂರ, 2 ಮೆ.ಪಿ.! (ಡೆಪ್ತ್) ಮಸೂರಗಳಿವೆ. ಮುಂಬದಿಯಲ್ಲಿ ಎರಡು ಕ್ಯಾಮರಾ ಇರುವುದು ಇದರ ವಿಶೇಷಗಳಲ್ಲೊಂದು. ಫೋನಿನ ಬಲ ತುದಿಯಲ್ಲಿ ಪಂಚ್‌ಹೊàಲ್‌ನೊಳಗೆ ಎರಡು ಲೆನ್ಸ್‌ನ ಕ್ಯಾಮರಾ ಇದೆ. 20 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಲೆನ್ಸ್ ಗಳಿವೆ. ಇಷ್ಟೆಲ್ಲಾ ವಿಶೇಷಗಳಿದ್ದ ಮೇಲೆ ಕ್ಯಾಮರಾ ಈ ದರಕ್ಕೆ ಚೆನ್ನಾಗಿಯೇ ಇರುತ್ತದೆ ಎನ್ನಲಡ್ಡಿಯಿಲ್ಲ.
ದೊಡ್ಡ ಬ್ಯಾಟರಿ : ಶಿಯೋಮಿ ಫೋನ್‌ಗಳು ಬ್ಯಾಟರಿಗೆ ಫೇಮಸ್ಸು. ಹೀಗಾಗಿ ಈ ಫೋನು ಕೂಡ ದೊಡ್ಡ ಬ್ಯಾಟರಿ ಹೊಂದಿದೆ. 4500 ಎಂಎಎಚ್ ಬ್ಯಾಟರಿಯಿದೆ. ಇದಕ್ಕೆ 27 ವ್ಯಾಟ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ. ಹೌದು, ಆ ಜಾರ್ಜರ್‌ಅನ್ನೂ ಫೋನ್ ಜೊತೆಗೆ ನೀಡಲಾಗುತ್ತಿದೆ! ಇನ್ನು ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೋನಿನ ಪವರ್ ಬಟನ್ ಮೇಲೆ ಇದೆ. ಅಂದರೆ, ಅದು ಫೋನಿನ ಪರದೆ ಮೇಲೆ ಅಥವಾ ಹಿಂಬದಿಯಲ್ಲಿ ಇಲ್ಲ. ಫೋನಿನ ಬಲ ಬದಿಯಲ್ಲಿದೆ. ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹೊಂದಿದೆ. ಆಡಿಯೋಗಾಗಿ 3.5 ಎಂಎಂ ಜಾಕ್ ನೀಡಲಾಗಿದೆ.
ಪರದೆಯ ರಿಫ್ರೆಶ್ ರೇಟ್ 120 ಹರ್ಟ್ಜ್ : ಪೋಕೋ ಎಕ್ಸ್2 ಫೋನು 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಪರದೆಯ ಬಲದ ಕಡೆಯಲ್ಲಿ ಎರಡು ಕ್ಯಾಮರಾಗಳ ಪಂಚ್ ಹೋಲ್‌ಗಳಿವೆ. ಪರದೆ ಸುಲಭಕ್ಕೆ ಒಡೆಯಬಾರದೆಂದು ಗೊರಿಲ್ಲಾ ಗ್ಲಾಸ್5 ರಕ್ಷಣಾತ್ಮಕ ಲೇಪನ ನೀಡಲಾಗಿದೆ. ಈ ಪರದೆಯ ರಿಫ್ರೆಶ್‌ರೇಟ್ 120 ಹರ್ಟ್ಜ್ ಇರುವುದನ್ನು ಕಂಪೆನಿ ಹೆಮ್ಮೆಯಿಂದ ಹೇಳಿಕೊಂಡಿದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಪರದೆಯ ರಿಫ್ರೆಶ್‌ರೇಟ್ 60 ಹರ್ಟ್ಜ್ ಇರುತ್ತದೆ. ಇತ್ತೀಚಿಗೆ ಬಂದ ಒನ್‌ಪ್ಲಸ್ 7 ಪ್ರೊದಲ್ಲಿ 90 ಹರ್ಟ್ಜ್ ರಿಫ್ರೆಶ್‌ರೇಟ್ ಇತ್ತು.
ಪೋಕೋ ಎಕ್ಸ್ 2ದಲ್ಲಿ 120 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ರಿಫ್ರೆಶ್ ರೇಟ್ ಹೆಚ್ಚಿದ್ದಷ್ಟೂ ಪರದೆಯ ಮೇಲೆ ಮೂಡುವ ಚಿತ್ರಗಳು ಸ್ಪಷ್ಟವಾಗಿ, ಸ್ಫುಟವಾಗಿ ಕಾಣಿಸುತ್ತದೆ. ಅಲ್ಲದೆ ಇದು ಹೈಡೆಫೆನಿಷನ್ ಗ್ರಾಫಿಕ್ಸ್ ಉಳ್ಳ ದೊಡ್ಡ ದೊಡ್ಡ ಗೇಮ್‌ಗಳನ್ನು ಸರಾಗವಾಗಿ ಆಡಲು ಅನುಕೂಲ ಮಾಡಿಕೊಡುತ್ತದೆ. ಭಾರತದಲ್ಲಿ ಏಸುಸ್ ಸಂಸ್ಥೆಯ “ರೋಗ್ ಫೋನ್ 2′ ಬಿಟ್ಟರೆ 120 ರಿಫ್ರೆಶ್‌ರೇಟ್ ಇರುವ ಫೋನ್ ಪೋಕೋ ಎಕ್ಸ್2 ಮಾತ್ರ. 20 ಸಾವಿರದೊಳಗಿನ ಫೋನ್‌ಗಳಲ್ಲಿ ಈ ಸವಲತ್ತನ್ನು ಒದಗಿಸಿರುವುದು ಸಹ ವಿಶೇಷವೇ.
-ಕೆ.ಎಸ್. ಬನಶಂಕರ ಆರಾಧ್ಯ