Advertisement

Pope: ಪೋಪ್‌ಗೆ ಶ್ವಾಸಕೋಶದ ಉರಿಯೂತ

07:23 PM Nov 26, 2023 | Team Udayavani |

ವ್ಯಾಟಿಕನ್‌ ಸಿಟಿ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ತಮಗೆ ಶ್ವಾಸಕೋಶದ ಉರಿಯೂತದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ಈ ವಾರ ದುಬೈನಲ್ಲಿ ಆಯೋಜಿಸಲಾಗಿರುವ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವುದಾಗಿ ಹೇಳಿದ್ದಾರೆ.

Advertisement

ಗಮನಾರ್ಹ ಅಂಶವೆಂದರೆ ಭಾನುವಾರ ಅವರು ವ್ಯಾಟಿಕನ್‌ ಸಿಟಿಯ ಸೈಂಟ್‌ ಪೀಟರ್ಸ್‌ ಸ್ಕ್ವಾರ್‌ನ ಕಿಟಕಿಯ ಮೂಲಕ ಭಾನುವಾರದ ಪ್ರಾರ್ಥನೆಯ ಕಾರ್ಯಕ್ರಮದಲ್ಲಿ ಪೋಪ್‌ ಭಾಗಿಯಾಗಿರಲಿಲ್ಲ. ಆದರೆ, ಅವರ ಸಂದೇಶವನ್ನು ವ್ಯಾಟಿಕನ್‌ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ. ಅವರ ಬಲದ ಕೈಗೆ ಕಾನ್ಯುಲಾ ಅಳವಡಿಸಿದ್ದಕ್ಕೆ ಬ್ಯಾಂಡೇಜ್‌ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next