ಮುಂಬಯಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದ ಸುಮಾರು 11 ಸಾವಿರಕೋ. ರೂ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಗೋಕುಲ್ ಶೆಟ್ಟಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಗೋಕುಲ್ ಶೆಟ್ಟಿ ಅವರೊಂದಿಗೆ ಸಿಂಗಲ್ ವಿಂಡೋ ಆಪರೇಟರ್ ಆಗಿದ್ದ ಮನೋಜ್ ಖಾರತ್ ಮತ್ತು ಹೇಮಂತ್ ಭಟ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಲಾಗುತ್ತಿದೆ.
ಹಗರಣದ ಪ್ರಮುಖ ಆರೋಪಿಗಳಾದ ನೀರಜ್ ಮೋದಿ ಹಾಗೂ ಅವರ ಸಂಬಂಧಿ ಮೆಹುಲ್ ಚೌಕ್ಸಿ ವಿದೇಶಕ್ಕೆ ಪರಾರಿಯಾಗಿರುವ ಹಿನ್ನಲೆಯಲ್ಲಿ ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸಲಾಗಿದೆ.
ಮೋದಿ ಹಾಗೂ ಚೋಕ್ಸಿ ಅವರು ಒಂದು ವಾರದೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ, ಅವರ ಪಾಸ್‌ಪೋರ್ಟ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಲಾಗಿದೆ.
ಸುಮಾರು 11 ಸಾವಿರಕೋ. ರೂ. ಹಗರಣದ ಆರೋಪ ಎದುರಿಸು ತ್ತಿರುವ ಈ ಇಬ್ಬರೂ ಈಗಾಗಲೇ ದೇಶ ತೊರೆದಿರುವುದರಿಂದ ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತು ಮಾಡುವಂತೆ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಸಿಬಿಐ ಹಾಗೂ ಇಡಿ ಕೇಂದ್ರ ಸರಕಾರವನ್ನು ಕೋರಿದ್ದವು.