Advertisement

ಚೋಕ್ಸಿ ಬಳಿಯಿದ್ದ 41 ಅಕ್ರಮ ಸ್ವತ್ತುಗಳ ಜಪ್ತಿ 

03:17 PM Sep 03, 2018 | |

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ಮೋಸ ಮಾಡಿರುವ ಉದ್ಯಮಿ ಮೆಹುಲ್‌ ಚೋಕ್ಸಿಯ 41 ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇವು ಅಕ್ರಮ ಸ್ವತ್ತುಗಳಾಗಿವೆ ಎಂದು ಹಣ ದುರ್ಬಳಕೆ ತಡೆ ಪ್ರಾಧಿಕಾರ ಹೇಳಿದೆ. 1,210 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಈಗಾಗಲೇ ಜಪ್ತಿ ಮಾಡಲಾಗಿವೆ.

Advertisement

ತನಿಖೆ ಮುಕ್ತಾಯವಾಗುವವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ಇವುಗಳನ್ನು ನೀಡಲು ಪ್ರಾಧಿಕಾರ ನಿರ್ಧರಿಸಿದೆ. 15 ಫ್ಲಾಟ್‌ಗಳು, 17 ಕಚೇರಿಗಳು, ನಾಲ್ಕು ಎಕರೆ ಫಾರ್ಮ್ ಹೌಸ್‌ ಹಾಗೂ 231 ಎಕರೆ ಭೂಮಿಯನ್ನು ಈಗಾಗಲೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next