Advertisement
ಅದಕ್ಕೆ ಪೂರಕವಾಗಿ ಮಂಗಳವಾರ ಆ್ಯಕ್ಸಿಸ್ ಬ್ಯಾಂಕ್‌ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಶ್ರೀನಿವಾಸ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಎಸ್‌ಎಫ್ಐಒ ಮುಂದೆ ಹಾಜರಾಗಿ, ಸಾಲ ನೀಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಐಸಿಐಸಿಐ ಬ್ಯಾಂಕ್ ನೇತೃತ್ವದಲ್ಲಿ ಖಾಸಗಿ ಕ್ಷೇತ್ರದ 31 ಬ್ಯಾಂಕ್‌ಗಳು ಗೀತಾಂಜಲಿ ಜ್ಯುವೆಲ್ಲರ್ಸ್‌ಗೆ ಸಾಲ ನೀಡಿದ್ದವು. ಹೀಗಾಗಿ ಪರಾರಿಯಾಗಿರುವ ಇಬ್ಬರು ವ್ಯಕ್ತಿಗಳ ಸಂಸ್ಥೆಗಳ ಜತೆಗೆ ಇದ್ದ ವಹಿವಾಟಿನ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಎಸ್‌ಎಫ್ಐಒ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ನೀರವ್, ಮಲ್ಯ ಪ್ರಕರಣದ ಬಳಿಕ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ವಿಶೇಷ ಸೂಚನೆಯೊಂ ದನ್ನು ನೀಡಲಾಗಿದೆ. 50 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಮಾಡಿರುವ ವ್ಯಕ್ತಿ ಗಳ ಪಾಸ್‌ಪೋರ್ಟ್ ವಿವರವನ್ನು 45 ದಿನಗಳ ಒಳಗಾಗಿ ಪಡೆದುಕೊಳ್ಳುವಂತೆ ಹಣಕಾಸು ಸಚಿವಾಲಯ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸೂಚಿಸಿದೆ. ಕಾರ್ಪೊ ರೇಟ್ ಕುಳಗಳಿಗೆ ಸಾಲ ನೀಡುವ ಅರ್ಜಿಯಲ್ಲಿ ಬದಲಾವಣೆ ಮಾಡಿ ಅವರ ಪಾಸ್‌ಪೋರ್ಟ್ ವಿವರಗಳನ್ನು ನಮೂದಿಸುವಂತೆ ಮಾಡಬೇಕು ಎಂದೂ ಸೂಚಿಸಲಾಗಿದೆ.