ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಅನಗತ್ಯವಾದ ಮತ್ತು ಬೆದರಿಕೆ ಒಡ್ಡುವಂತಹ ಭಾಷೆ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದು, ಪ್ರಧಾನಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿದೆ.
ಕರ್ನಾಟಕದ ಚುನಾವಣಾ ಪ್ರಚಾರದ ವೇಳೆ ಮೋದಿ ಅವರು ಆಕ್ಷೇಪಾರ್ಹ ಭಾಷೆ ಬಳಸಿದ್ದು ಖಂಡನಾರ್ಹ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಪಿ.ಚಿದಂಬರಂ, ಅಶೋಕ್ ಗೆಹೊಟ್, ಮಲ್ಲಿಕಾರ್ಜುನ ಖರ್ಗೆ, ಕರಣ್‌ಸಿಂಗ್, ಅಂಬಿಕಾ ಸೋನಿ, ಕಮಲ್‌ನಾಥ್, ಆನಂದ್ ಶರ್ಮಾ, ದಿಗ್ವಿಜಯ್ ಸಿಂಗ್ ಮತ್ತಿತರ ಪ್ರಮುಖರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಇದೇ ತಿಂಗಳ 6ರಂದು ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿ, “ಕಾಂಗ್ರೆಸ್‌ನ ನೇತಾರರು ಕಿವಿ ತೆರೆದು ಕೇಳಿಸಿಕೊಳ್ಳಿ. ನೀವೇನಾದರೂ ಮಿತಿ ಮೀರಿದರೆ, ನಾನು ಮೋದಿ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಹೇಳಿ ದ್ದರು. ಕಾಂಗ್ರೆಸ್ ನಾಯಕರು ಬರೆದಿರುವ ಪತ್ರದಲ್ಲಿ ಈ ಭಾಷಣದ ಯೂಟ್ಯೂಬ್ ಲಿಂಕ್ ಅನ್ನೂ ಲಗತ್ತಿಸಲಾಗಿದೆ.
ಜತೆಗೆ, ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ನಾಯಕರ ವಿರುದ್ಧವೂ ಪ್ರಧಾನಿ ಇಂಥ ಭಾಷೆಯನ್ನು ಬಳಕೆ ಮಾಡದಂತೆ ರಾಷ್ಟ್ರಪತಿಯವರು ಎಚ್ಚರಿಕೆ ನೀಡಬೇಕು. ಏಕೆಂದರೆ, ಪ್ರಧಾನಿಯಂಥ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಇಂಥ ನಡವಳಿಕೆ ತಕ್ಕುದಲ್ಲ. ಅದು ಚುನಾ ವಣಾ ಪ್ರಚಾರವಾಗಿದ್ದರೂ, ಪ್ರಧಾನಿಯಾ ದವರು ಬೆದರಿಕೆ ಹಾಕುವಂಥ ಮಾತುಗಳ ನ್ನಾಡಬಾರದು. ದೇಶದ ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳೂ ಅಗಾಧವಾದ ಘನತೆ ಹಾಗೂ ಸಭ್ಯತೆಯನ್ನು ಪಾಲಿಸಿ ಕೊಂಡು ಬಂದಿದ್ದಾರೆ. ಈಗ ಪ್ರಧಾನಿ ಮೋದಿ ಅವರು ಆಡಿರುವ ಮಾತುಗಳು ಖಂಡನೆಗೆ ಅರ್ಹವಾದದ್ದು ಎಂದೂ ಪತ್ರದಲ್ಲಿ ಹೇಳಲಾಗಿದೆ.
ಪ್ರಧಾನಿ ವಿರುದ್ಧ ಕಾಂಗ್ರೆಸ್ ಕೂಡ ಆಕ್ಷೇಪಾರ್ಹ ಪದ ಗಳನ್ನು ಬಳಸಿದೆ. ಅವರನ್ನು “ಸಾವಿ ನ ವ್ಯಾಪಾರಿ’, “ನೀಚ’ ಎಂದು ಕರೆದಿದೆ. ಕರ್ನಾಟಕ ಚುನಾವಣೆ ಯಲ್ಲಿ ಸೋಲು ಖಚಿತವಾದ ಕಾರಣ ಕಾಂಗ್ರೆಸ್ ಇಂಥ ಸುಳ್ಳು ಸಬೂಬು ಹುಡುಕುತ್ತಿದೆ.
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ