ನವ ದೆಹಲಿ : ಪ್ರಧಾನಿ ಮೋದಿಯವರ ಬಾಂಗ್ಲಾದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಭಾರತದ ಚುನಾವಣಾ ಆಯೋಗಕ್ಕೆ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ.
ಪ್ರಧಾನಿಯವರ ಬಾಂಗ್ಲಾದೇಶದ ಭೇಟಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿದೆ ಎಂದು ಪಕ್ಷ ದೂರಿನಲ್ಲಿ ಹೇಳಿಕೊಂಡಿದೆ.
ಓದಿ : ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ
ಮೋದಿಯವರು ಅಧಿಕೃತ ಉದ್ದೇಶಕ್ಕಾಗಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಈ ಭೇಟಿ ಮಾರ್ಚ್ 27 ರಂದು ಅವರ ಪ್ರಚಾರ ಸಭಾ ಕಾರ್ಯಕ್ರಮಗಳ ಮೇಲೆ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳಲ್ಲಿನ ಮತದಾನದ ಮೇಲೆ ಪ್ರಭಾವ ಬೀರುವ ಉದ್ದೇಶದ್ದಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಟಿಎಂಸಿ ತಿಳಿಸಿದೆ.
ಇನ್ನು, ಮೋದಿಯವರ ಬಾಂಗ್ಲಾದೇಶದ ಒರಕಂಡಿ ಭೇಟಿಯ ಹಿಂದಿನ ರಾಜಕೀಯ ಉದ್ದೇಶವು ಸಾಬೀತಾಗಿದೆ, ಅವರು ಭಾರತ ಸರ್ಕಾರದಲ್ಲಿ ಯಾವುದೇ ಅಧಿಕೃತ ಸ್ಥಾನವನ್ನು ಹೊಂದಿರದ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಶಾಂತನು ಠಾಕೂರ್ ಅವರನ್ನು ಭಾಂಗ್ಲಾದೇಶಕ್ಕೆ ಕರೆದೊಯ್ದಿದ್ದಾರೆ. ಭಾರತೀಯ ಚುನಾವಣಾ ಆಯೋಗ ಪ್ರಧಾನಿ ವಿರುದ್ಧ ದಂಡನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಟಿಎಂಸಿ ಒತ್ತಾಯಿಸಿದೆ.
ಓದಿ : ಜಾರಕಿಹೊಳಿ ಸಿಡಿ ಪ್ರಕರಣ: ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ