Advertisement

ಕಂಟೈನ್‌ಮೆಂಟ್‌ ವಲಯ ಹೆಚ್ಚಿಸಿದ ಪಿಎಂಸಿ

05:35 PM Jul 04, 2020 | Suhan S |

ಪುಣೆ, ಜು. 3: ಪುಣೆ ಮಹಾನಗರ ಪಾಲಿಕೆಯು ತನ್ನ ಧಾರಕ ವಲಯ ನಕ್ಷೆಯನ್ನು ಪರಿಷ್ಕರಿಸಿದ್ದರಿಂದ ಪುಣೆ ನಗರದಲ್ಲಿ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ ಹಿಂದಿನ 74ರಿಂದ 109ಕ್ಕೆ ಏರಿಕೆಯಾಗಿದೆ.

Advertisement

ಕಳೆದ ಎರಡು ವಾರಗಳಲ್ಲಿ ಶೇ. 58ರಷ್ಟು ಪ್ರಕರಣಗಳು ಕಂಟೈನ್‌ ಮೆಂಟ್‌ ವಲಯಗಳ ಹೊರಗಿನ ಪ್ರದೇಶಗಳಿಂದ ಬಂದಿವೆ ಎಂದು ಪಿಎಂಸಿ ತಿಳಿಸಿವೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಅಸ್ತಿತ್ವ ದಲ್ಲಿರುವ ನಿರ್ಬಂಧಗಳನ್ನು ಸಡಿಲ ಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸುಳಿವು ನೀಡಿದ್ದರಿಂದ ನಾಗರಿಕ ಸಂಸ್ಥೆ ನಿಯಮ ಸಡಿಲಿಸುವ ಬಗ್ಗೆ ಯಾವುದೇ ಹೊಸ ಆದೇಶಗಳನ್ನು ನೀಡಿಲ್ಲ. ಪುರಸಭೆ ಆಯುಕ್ತ ಶೇಖರ್‌ ಗಾಯಕ್ವಾಡ್‌ ಅವರು ಮಾತನಾಡಿ, ಸೂಕ್ಷ್ಮ ಧಾರಕ ವಲಯಗಳ ಸಂಖ್ಯೆ ಹೆಚ್ಚಾಗಿದ್ದರೂ, ಎಲ್ಲ ವಲಯಗಳನ್ನು ಪಿಎಂಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಿಎಂಸಿ ಈಗ ಹೆಚ್ಚಿನ ಕಟ್ಟಡಗಳನ್ನು ಧಾರಕ ವಲಯಗಳಾಗಿ ಮಾರ್ಪಡಿಸಿದೆ. ಪರಿಷ್ಕೃತ ಕಾರ್ಯತಂತ್ರದ ಪ್ರಕಾರ ಪಿಎಂಸಿ ಪ್ರತಿ ವಾರ ತನ್ನ ಪರಿಶೀಲನೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಎಲ್ಲೇಲ್ಲಿ ಕಂಟೈನ್‌ಮೆಂಟ್‌ ವಲಯ ಹೊಸ ಆದೇಶದ ಪ್ರಕಾರ, 15 ವಾರ್ಡ್‌ಗಳಲ್ಲಿ 109 ಧಾರಕ ವಲಯಗಳು ಹರಡಿವೆ. ಧನಕ್‌ ವಾಡಿ-ಸಹಕರ್‌ನಗರಗಳಲ್ಲಿ ಗರಿಷ್ಠ 12 ವಲಯಗಳನ್ನು ವರದಿ ಮಾಡಲಾಗಿದೆ. ಯೆರಾವಾಡಾ, ಭವಾನಿಪೇಟ್‌ ಮತ್ತು ಕೊಂಡ್ವಾ ನಿರ್ಬಂಧಗಳ ಅಡಿಯಲ್ಲಿ ತಲಾ ಮೂರು ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ.

ಈ ಮೊದಲು ಜೂನ್‌ 24ರಂದು ಪಿಎಂಸಿ 74 ಪ್ರದೇಶಗಳನ್ನು ಕಂಟೈನ್‌ ಮೆಂಟ್‌ ವಲಯಗಳ ಅಡಿಯಲ್ಲಿ ಇರಿಸುವ ಆದೇಶ ಹೊರಡಿಸಿತ್ತು. ಹೊಸ ನೀತಿಯ ಪ್ರಕಾರ, ಹೊಸ ಪ್ರಕರಣಗಳನ್ನು ವರದಿ ಮಾಡುವ ಪ್ರದೇಶಗಳು ಅಥವಾ ಕಟ್ಟಡಗಳನ್ನು ಧಾರಕ ವಲಯಗಳಾಗಿ ಘೋಷಿಸಲು ಮತ್ತು ಅವುಗಳನ್ನು ಬ್ಯಾರಿಕೇಡ್‌ ಗಳಿಂದ ಮುಚ್ಚಲು ಪಿಎಂಸಿ ಆಯುಕ್ತರು ಸ್ಥಳೀಯ ವಾರ್ಡ್‌ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next