ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಜೂನ್ 8 ರ ಭೇಟಿ ಈ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಶಿವಸೇನೆಯೊಂದಿಗೆ ಬಿಜೆಪಿ ಕೈ ಜೋಡಿಸಲಿದೆಯೇ ಎಂಬ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶಿವ ಸೇನೆ ಹಿರಿಯ ನಾಯಕ ಸಂಜಯ್ ರಾವತ್, ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಬೇರೆ. ಠಾಕ್ರೆ ಹಾಗೂ ಮೋದಿ ವೈಯಕ್ತಿಕವಾಗಿ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್ ಡಿ ಟಿವಿಗೆ ಪ್ರತಿಕ್ರಿಯಿಸಿದ ರಾವತ್, ಮೋದಿ ಹಾಗೂ ಠಾಕ್ರೆ ಸರಿ ಸುಮಾರು 40 ನಮಿಷಗಳ ಕಾಲ ರಾಜ್ಯದ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಮರಾಠ ಕೋಟಾ ದ ಬಗ್ಗೆ ಮುಖ್ಯಮಂತ್ರಿ ಠಾಕ್ರೆ ಅವರು ಹೆಚ್ಚು ಆದ್ಯತೆಯನ್ನು ಕೊಟ್ಟು ಮಾತಾಡಿರುತ್ತಾರೆ. ರಾಜಕೀಯ ದ್ವೇಷ ಬೇರೆ. ಮೋದಿ ಹಾಗೂ ಠಾಕ್ರೆ ಇಬ್ಬರೂ ಕೂಡ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಭವಿಷ್ಯದಲ್ಲಿ ಯತ್ನಾಳ್ ಗೆ ಉತ್ತಮ ದಿನ ಬರಲಿ, ಅವರ ಧ್ವನಿಗೆ ಧ್ವನಿಯಾಗಿರುತ್ತೇನೆ: ಯೋಗೇಶ್ವರ್
ಶರದ್ ಪವಾರ್ ಅವರ ವಿಚಾರದಲ್ಲಿಯೂ ನಮ್ಮ ಪಕ್ಷವನ್ನು ಗಮನಿಸಿ. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಯಾವಾಗಲೂ ಪವಾರ್ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದೇವೆ. ಇದು ಮಹಾರಾಷ್ಟ್ರದ ಸಂಸ್ಕೃತಿ. ಶಿವಸೇನೆಯ ಸಂಸ್ಕೃತಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮೋದಿ ಹಾಗೂ ಠಾಕ್ರೆ ಭೇಟಿಯ ನಂತರ ಮಹಾರಾಷ್ಟ್ರ ರಾಜ್ಯ ರಾಜಕೀಯ ವಲಯದಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಅಭಿಪ್ರಾಯ ಪಟ್ಟಿದ್ದವು.
ಇದನ್ನೂ ಓದಿ : ಚಲಿಸುವ ರೈಲಿನಿಂದ ಜಾರಿ ಬಿದ್ದ ವ್ಯಕ್ತಿಯ ಜೀವ ಉಳಿಸಿದ ಮಹಿಳಾ ಕಾನ್ ಸ್ಟೇಬಲ್