Advertisement

PM ಸೂರ್ಯಘರ್‌: ಪ್ರಧಾನಿ ನರೇಂದ್ರ ಮೋದಿ ಚಾಲನೆ

12:09 AM Feb 14, 2024 | Pranav MS |

ನವದೆಹಲಿ: ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆ­ಸಲು ಹಾಗೂ ಜನ ಸಾಮಾನ್ಯರ ಕಲ್ಯಾಣವನ್ನು ಗಮನದಲ್ಲಿಟ್ಟಿಕೊಂಡು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಿಎಂ ಸೂರ್ಯಘರ್‌-ಮುಫ್ತ್‌ ಬಿಜ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ. ಛಾವಣಿ ಸೌರ ವಿದ್ಯುತ್‌ ಯೋಜನೆ­ಯಿಂದ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ ಒದಗಿಸಲಿದೆ ಎಂದು ಹೇಳಿದ್ದಾರೆ.

Advertisement

ಈ ಯೋಜನೆಗೆ ಕೇಂದ್ರ ಸರ್ಕಾರ 75000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹೂಡಿಕೆ ಮಾಡಿದೆ. ಸೌರ ಫ‌ಲಕಗಳನ್ನು ಅಳವಡಿಸುವ ಪ್ರತಿ ಮನೆಗೂ ಮಾಸಿಕವಾಗಿ 300 ಯೂನಿಟ್‌ ಉಚಿತ ವಿದ್ಯುತ್‌ ಸಿಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸೌರ ಫ‌ಲಕಗಳನ್ನು ಅಳವಡಿಸಲು ಬಯಸು­ವವರಿಗೆ ಆರ್ಥಿಕ ಹೊರೆಯಾಗದಂತೆ ಖಾತರಿ ಪಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ಮತ್ತು ರಿಯಾಯತಿಯಲ್ಲಿ ಬ್ಯಾಂಕ್‌ ಸಾಲಗಳನ್ನೂ ದೊರಕಿಸಿ ಕೊಡುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next