Advertisement

ರಾಜಕಾರಣಿಗಳಿಗೆ ಇಲ್ಲ ಮೊದಲ ಲಸಿಕೆ

12:12 AM Jan 12, 2021 | Team Udayavani |

ಹೊಸದಿಲ್ಲಿ: ನಮಗೆ ಮೊದಲು ಲಸಿಕೆ ಸಿಗಲಿ ಎಂದು ರಾಜಕಾರಣಿ ಗಳು ಆಶಿಸುವುದು ಬೇಡ. ಆರೋಗ್ಯ ಕಾರ್ಯಕರ್ತರು, ಕೋವಿಡ್ ಸೋಂಕಿನ ವಿರುದ್ಧ ಹೋರಾಟ ದಲ್ಲಿ ಮುಂಚೂಣಿಯಲ್ಲಿ ಇರುವರಿಗೆ ಮೊದಲು ಲಸಿಕೆ ನೀಡಬೇಕು.

Advertisement

– ಹೀಗೆಂದು ಪ್ರಧಾನಿ ಮೋದಿ ಸ್ಪಷ್ಟ ವಾಗಿ ಹೇಳಿದ್ದಾರೆ. ಜ. 16ರಂದು ಲಸಿಕೆ ವಿತರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಸಿಎಂಗಳ ಜತೆಗೆ ಸೋಮವಾರ ನಡೆ ಸಿದ ವೀಡಿಯೋ ಕಾನ್ಫರೆನ್ಸ್‌ ನಲ್ಲಿ ಅವರು ಮಾತ ನಾಡಿ ದರು. ಹರಿ ಯಾಣದಲ್ಲಿ ಆದ್ಯತೆಯ ಪಟ್ಟಿಯಲ್ಲಿ ಶಾಸಕರು, ಸಂಸದರ ಹೆಸರುಗಳು ಇರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಎಚ್ಚರಿಕೆ ನೀಡಿದ್ದಾರೆ.

50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವರು, ಮಧುಮೇಹ, ಅಧಿಕ ರಕ್ತದ ಒತ್ತಡ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಬಳಲು  ತ್ತಿರುವ 50 ವರ್ಷಕ್ಕಿಂತ ಕೆಳಗಿನ ವಯೋ ಮಾನದವರಿಗೂ ಲಸಿಕೆ ನೀಡುವುದನ್ನು ಆದ್ಯತೆಯಲ್ಲಿ ಪರಿಗಣಿಸಬೇಕು ಎಂದಿದ್ದಾರೆ.

ಮೊದಲ ಹಂತಕ್ಕೆ ಸರಕಾರಿ ನೆರವು :

ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊರೊನಾ ಸೇನಾನಿಗಳಿಗೆ ಲಸಿಕೆ ನೀಡ ಲಾಗು ತ್ತದೆ. ಅದರ ವೆಚ್ಚ ವನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ಮೋದಿ ಹೇಳಿದ್ದಾರೆ. ದೇಶದ ಲಸಿಕೆ ನೀಡಿಕೆ ಕಾರ್ಯಕ್ರಮ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು ಎಂದು ಪ್ರಧಾನಿ ಬಣ್ಣಿಸಿದ್ದಾರೆ.

Advertisement

ಕಡಿಮೆ ವೆಚ್ಚ :

ದೇಶದಲ್ಲಿಯೇ ಸಿದ್ಧಗೊಂಡ 2 ಲಸಿಕೆಗಳು ಹೆಚ್ಚು ವೆಚ್ಚದಾಯಕ ಅಲ್ಲ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಪ್ರಧಾನಿ ಹೇಳಿದ್ದಾರೆ.

ವದಂತಿ ನಿಯಂತ್ರಿಸಿ :

ಲಸಿಕೆ ಬಗ್ಗೆ ಭೀತಿ ಹುಟ್ಟಿಸುವ ವದಂತಿಗಳನ್ನು ನಿಯಂತ್ರಿಸಬೇಕು.  ಧಾರ್ಮಿಕ ಮತ್ತು ಸಾಮಾಜಿಕ ಗುಂಪು ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕ್ರಮಗಳು ನಡೆಯಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ

ಲಸಿಕೆ ಸುರಕ್ಷಿತವಾಗಿಲ್ಲ ಎಂಬ ವರದಿಗಳೇ ಆಧಾರ ರಹಿತ. ಜ. 16ರಿಂದ ಲಸಿಕೆ ನೀಡಿಕೆ ಆರಂಭ ವಾಗಲಿದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಉತ್ತಮವಾಗಿಯೇ ಇದೆ ಎಂದಿದ್ದಾರೆ.

ಪ್ರತೀ ಡೋಸ್‌ಗೆ 210 ರೂ. :

ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಕೊವಿಶೀಲ್ಡ್‌ ಲಸಿಕೆಗೆ ಪ್ರತೀ ಡೋಸ್‌ಗೆ ಜಿಎಸ್‌ಟಿ ಸೇರಿ 210 ರೂ. ತಗಲಲಿದೆ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಸೀರಮ್‌ ಸಂಸ್ಥೆ ಒಪ್ಪಂದಕ್ಕೆ ಬಂದಿವೆ. ಕೇಂದ್ರವು ಸೀರಮ್‌ನಿಂದ 110 ಲಕ್ಷ ಡೋಸ್‌ ಲಸಿಕೆ ಖರೀದಿಗೆ ಸೂಚನೆ ಹೊರಡಿಸಿದೆ. ಹೈದರಾಬಾದ್‌ನ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಖರೀದಿ ಬಗ್ಗೆಯೂ ಕೇಂದ್ರ ಸರಕಾರ ಒಪ್ಪಂದ ಮಾಡಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next