Advertisement
2015ರಲ್ಲಿ ಆರಂಭ :
Related Articles
Advertisement
1.5 ಲಕ್ಷ ರೂ. ಸಾಲ :
ಈ ಯೋಜನೆಯಡಿ ಸರಕಾರವು 1.5 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡುತ್ತದೆ. ಕಡಿಮೆ ವಿದ್ಯಾವಂತರು ಅಥವಾ 10ನೇ, 12ನೇ ತರಗತಿಯ ಡ್ರಾಪ್‌ಟೌಟ್ ಆದವರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಯೋಜನೆಯಡಿ ತರಬೇತಿ ಪಡೆಯುವವರಿಗೆ ಪ್ರತೀ 6 ತಿಂಗಳುಗಳಿಗೊಮ್ಮೆ ಸರಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.
ದೇಶದ 600 ಜಿಲ್ಲೆಗಳಲ್ಲಿ ತರಬೇತಿ :
729 ಪ್ರಧಾನ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ)ಗಳು, ಇತರ ತರಬೇತಿ ಕೇಂದ್ರಗಳು ಮತ್ತು 200ಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪಿಎಂಕೆವಿವೈ 3.0 ಅಡಿಯಲ್ಲಿ ದೇಶಾದ್ಯಂತ 600 ಜಿಲ್ಲೆಗಳಲ್ಲಿ ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ 8 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
ನೋಂದಾಯಿಸಿ ಕೊಳ್ಳುವುದು ಹೇಗೆ? :
ಈ ಯೋಜನೆಯಲ್ಲಿ ಹೆಸರು, ವಿಳಾಸ ಮತ್ತು ಇಮೇಲ್ ಇತ್ಯಾದಿಗಳನ್ನು ttp://pmkvyofficial.org ನಲ್ಲಿ ಭರ್ತಿ ಮಾಡಬೇಕು. ಅನಂತರ ಅರ್ಜಿದಾರರು ತರಬೇತಿ ನೀಡಲು ಬಯಸುವ ತಾಂತ್ರಿಕ ಕ್ಷೇತ್ರವನ್ನು ಆಯ್ಕೆ ಮಾಡಬೇಕಾಗುತ್ತದೆ. ಇದು ನಿರ್ಮಾಣ, ಎಲೆಕ್ಟ್ರಾನಿಕ್ಸ್, ಯಂತ್ರಾಂಶ, ಆಹಾರ ಸಂಸ್ಕರಣೆ, ಪೀಠೊಪಕರಣಗಳು ಮತ್ತು ಫಿಟ್ಟಿಂಗ್‌ಗಳು, ಕರಕುಶಲ ವಸ್ತುಗಳು, ರತ್ನ-ಆಭರಣಗಳು ಮತ್ತು ಚರ್ಮದ ತಂತ್ರಜ್ಞಾನದಂತಹ ಸುಮಾರು 40 ತಾಂತ್ರಿಕ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಆದ್ಯತೆಯ ತಾಂತ್ರಿಕ ಕ್ಷೇತ್ರದ ಜತೆಗೆ, ಇತರ ತಾಂತ್ರಿಕ ಕ್ಷೇತ್ರವನ್ನೂ ಆಯ್ಕೆ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ಭರ್ತಿ ಮಾಡಿದ ಅನಂತರ ನಿಮ್ಮ ತರಬೇತಿ ಕೇಂದ್ರವನ್ನು ನೀವು ಆರಿಸಬೇಕಾಗುತ್ತದೆ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ttps://pmkvyofficial.org/Index. ಈ ಜಾಲತಾಣಕ್ಕೆ ಭೇಟಿ ಕೊಡಿ.
ಜಾಲತಾಣದಲ್ಲಿ ಕಾರ್ಯಕ್ರಮ :
ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಾಹ್ನ 12.30ರಿಂದ ಇದರ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತವೆ. ಕೌಶಲ ಮತ್ತು ಉದ್ಯಮಶೀಲತೆ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.
PMKVY Facebook: www.facebook.com/PMKVYOfficial
Skill India Facebook: www.facebook.com/SkillIndiaOfficial
Skill India Twitter: www.twitter.com/@MSDESkillindia
Skill India YouTube: https://www.youtube.com/channel/UCzNfVNX5yLEUhIRNZJKniHg