Advertisement

PM ಸ್ವ-ನಿಧಿ ಯೋಜನೆ- ಯಾರು ಅರ್ಹರು? 

12:02 AM Oct 16, 2023 | Team Udayavani |

ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮತ್ತು ಸ್ವಾವಲಂಬಿಯಾಗಿ ಬದುಕಲು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್‌ ನಿಧಿ (ಪಿಎಂ ಸ್ವ-ನಿಧಿ ಯೋಜನೆ)ಯನ್ನು ಜಾರಿಗೆ ತರಲಾಗಿದೆ.

Advertisement

ಯಾರು ಅರ್ಹರು?
ನಗರ ಪ್ರದೇಶ ವ್ಯಾಪ್ತಿಯಲ್ಲಿ ಅಂದರೆ, ಪಟ್ಟಣ ಪಂಚಾಯತ್‌, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ, ಗೂಡಂಗಡಿ, ಪೆಟ್ಟಿಗೆ ಅಂಗಡಿ, ಸ್ಥಳದಿಂದ ಸ್ಥಳಕ್ಕೆ ರಸ್ತೆ ಮೂಲಕ ಚಲಿಸುವ, ಕಾಲುದಾರಿ, ಪಾದಚಾರಿ ಮಾರ್ಗ, ಆಟೋ, ಸೈಕಲ್‌, ತಳ್ಳುವ ಬಂಡಿಗಳಲ್ಲಿ ಸರಕುಗಳ ಮಾರಾಟಗಾರರು, ಹಾಲು ಮಾರಾಟ ಮತ್ತು ಹಂಚಿಕೆ ಮಾಡುವ ವರು, ತರಕಾರಿ, ಹಣ್ಣುಗಳ ವ್ಯಾಪಾರಿಗಳು, ದಿನಪತ್ರಿಕೆ ವಿತರಕರು ಹಾಗೂ ರಸ್ತೆಬದಿಗಳಲ್ಲಿ ಇಸಿŒ ಮಾಡುವವರು (ಪೆಟ್ಟಿಗೆ ಅಂಗಡಿಯಲ್ಲಿ ಮಾಡುತ್ತಿದ್ದರೆ ಮಾತ್ರ), ಬೇರೆ ಗ್ರಾಮದವರಾಗಿ ದ್ದರೂ ನಗರದಲ್ಲಿ ಬೀದಿ ವ್ಯಾಪಾರಿಗಳಾಗಿದ್ದರೆ, ರಸ್ತೆ ಬದಿ ಗಿಡ ಮಾರುವವರು ಸೇರಿದಂತೆ ಇನ್ನಿತರರು ಈ ಯೋಜನೆಯಡಿ ಬರುತ್ತಾರೆ.

ಸಾಲ ನೀಡುವ ಹಂತ ಮತ್ತು ವಿಧಾನ ಹೇಗೆ?
10,000 ರೂ.: ಮೊದಲನೇ ಹಂತದಲ್ಲಿ ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆ (ನಗರಸಭೆ, ಪ.ಪಂ, ಪುರಸಭೆ, ಮಹಾನಗರ ಪಾಲಿಕೆ, ಬಿಬಿಎಂಪಿ)ಯಿಂದ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಪಡೆದಿರುವ ಬೀದಿಬದಿ ವ್ಯಾಪಾರಸ್ಥರಿಗೆ ಬ್ಯಾಂಕ್‌ ಮೂಲಕ 10,000 ಸಾವಿರ ರೂ. ಸಾಲ ನೀಡಲಾಗುತ್ತದೆ.

20,000: ಎರಡನೇ ಹಂತದಲ್ಲಿ 20,000 ಸಾಲ ನೀಡಲಾಗುತ್ತದೆ. ಮೊದಲನೇ ಹಂತದಲ್ಲಿ ಪಡೆದ 10,000 ರೂ. ಸಾಲವನ್ನು ನಿಗದಿತ ಸಮಯದಲ್ಲಿ ಪ್ರತೀ ತಿಂಗಳು ಮರು ಪಾವತಿ ಎನ್‌ಒಸಿ ಪ್ರತಿಯನ್ನು ಬ್ಯಾಂಕ್‌ನಿಂದ ಪಡೆದು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯ ಡೇ ನಲ್ಮ್ ವಿಭಾಗಕ್ಕೆ ಸಲ್ಲಿಸಿದರೆ ಅಂತಹ ಅರ್ಹ ಫ‌ಲಾನುಭವಿಗಳಿಗೆ 20,000 ರೂ. ಸಾಲ ನೀಡಲಾಗುತ್ತದೆ.

50,000: ಮೂರನೇ ಹಂತದಲ್ಲಿ 50,000 ರೂ. ಸಾಲ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಪಡೆದ 20,000 ರೂ. ಸಾಲವನ್ನು ನಿಗದಿತ ಸಮಯದಲ್ಲಿ ಪ್ರತೀ ತಿಂಗಳು ಮರು ಪಾವತಿ ಎನ್‌ಒಸಿ ಪ್ರತಿಯನ್ನು ಬ್ಯಾಂಕ್‌ನಿಂದ ಪಡೆದು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯ ಡೇ ನಲ್ಮ್ ವಿಭಾಗಕ್ಕೆ ಸಲ್ಲಿಸಿದರೆ ಅಂತಹ ಅರ್ಹ ಫ‌ಲಾನುಭವಿಗಳಿಗೆ 50,000 ರೂ. ಸಾಲ ನೀಡಲಾಗುತ್ತದೆ. c

Advertisement

ದಾಖಲೆಗಳು
ಆಧಾರ್‌, ಬಿಪಿಎಲ್‌, ಚುನಾವಣ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌, 2 ಪಾಸ್‌ ಫೋಟೊ, ಬೀದಿಬದಿ ವ್ಯಾಪಾರಸ್ಥರ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರ.

ಅರ್ಜಿ ಸಲ್ಲಿಕೆ ಹೇಗೆ?
ಸ್ಥಳೀಯ ಸಂಸ್ಥೆ ಪ.ಪಂ., ಪುರಸಭೆ, ನಗರಸಭೆಗಳಲ್ಲಿ ಡೇ ನಲ್ಮ್ ವಿಭಾಗದಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಬಿಬಿಎಂಪಿ, ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲ್ಫೆರ್‌ ಸೆಕ್ಷನ್‌ನ ಸಮುದಾಯ ಸಂಘಟನಾಧಿಕಾರಿ ಹಾಗೂ ಸಮುದಾಯ ಸಂಘಟಕರನ್ನು ಸಂಪರ್ಕಿಸಬೇಕು. ಸ್ಥಳೀಯ ಸಂಸ್ಥೆ ಯಿಂದ ನೀಡಲಾದ ಮಾರಾಟ ಮತ್ತು ಗುರುತಿನ ಚೀಟಿ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು.

ನಾಗಪ್ಪ ಹಳ್ಳಿಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next