ನವದೆಹಲಿ: ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅನಾರೋಗ್ಯದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:Koppala; ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು; ಸಂಬಂಧಿಕರ ಆಕ್ರೋಶ
ಬಿಜು ಜನತಾದಳದ ವರಿಷ್ಠ ನವೀನ್ ಪಟ್ನಾಯಕ್ ಅವರ ಹದಗೆಡುತ್ತಿರುವ ಅನಾರೋಗ್ಯದ ಹಿಂದೆ ಸಂಚು ಅಡಗಿದೆ ಎಂದು ಪ್ರಧಾನಿ ಮೋದಿ ಒಡಿಶಾದ ಬರಿಪಾಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ನವೀನ್ ಪಟ್ನಾಯಕ್ ಜತೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳು ನನ್ನ ಭೇಟಿಯಾದ ಸಂದರ್ಭದಲ್ಲಿ, ನವೀನ್ ಬಾಬು ಅವರು ಇನ್ನು ಹೆಚ್ಚು ಸಮಯ ಆರೋಗ್ಯದಿಂದ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.
ದಿಢೀರನೆ ಅನಾರೋಗ್ಯಕ್ಕೆ ಒಳಗಾಗಿರುವ ನವೀನ್ ಪಟ್ನಾಯಕ್ ಅವರ ಅನಾರೋಗ್ಯದ ಹಿಂದೆ ಏನಾದರು ಸಂಚು ಅಡಗಿರಬಹುದೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದರೆ, ಹದಗೆಡುತ್ತಿರುವ ಪಟ್ನಾಯಕ್ ಆರೋಗ್ಯದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಹೇಳಿದರು.