ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್ 13) ವಿಶ್ವನಾಥ ಮಂದಿರ ಮತ್ತು ಗಂಗಾ ನದಿಗೆ ಸಂಪರ್ಕ ಕಲ್ಪಿಸುವ 339 ಕೋಟಿ ರೂಪಾಯಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಲು ಆಗಮಿಸಿದ್ದರು.
ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ: ಸಚಿವ ಸುನೀಲ್ ಕುಮಾರ್
ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುವ ಮೊದಲು ಪವಿತ್ರ ಗಂಗಾನದಿಯಲ್ಲಿ ಮೂರು ಬಾರಿ ಮುಳುಗೆದ್ದು ಕಾಶಿ ವಿಶ್ವನಾಥ ಸನ್ನಿದಿಯಲ್ಲಿ ಪೂಜೆಯನ್ನು ನೆರವೇರಿಸಿದರು.
ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ನಡೆಸುವ ಮುನ್ನ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಗಂಗಾನದಿಯಲ್ಲಿ ಮೂರು ಬಾರಿ ಮುಳುಗೆದ್ದು, ಕಾಶಿ ವಿಶ್ವನಾಥನಿಗೆ ಕ್ಷೀರಾಭಿಷೇಕ ಮಾಡಿ ಪೂಜೆಯನ್ನು ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದಲ್ಲಿ ಈ ವಾರದಲ್ಲಿ ಚಾಲನೆ ನೀಡುತ್ತಿರುವ ಮೂರನೇ ಯೋಜನೆಯಾಗಿದೆ. ಕಳೆದ ವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರದ ಗೋರಖ್ ಪುರದಲ್ಲಿ 9,600 ಕೋಟಿ ರೂಪಾಯಿಯ ಯೋಜನೆಗೆ ಚಾಲನೆ ನೀಡಿದ್ದರು.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಸಮಾಜವಾದಿ ಪಕ್ಷದ ಸರ್ಕಾರದ್ದಾಗಿದೆ ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು. ಸರಯೂ ಕಾಲುವೆ ಯೋಜನೆ ಕೂಡಾ ತಮ್ಮ ಸರ್ಕಾರದ ಅವಧಿಯಲ್ಲಿ ಶೇ.75ರಷ್ಟು ಪೂರ್ಣಗೊಂಡಿರುವುದಾಗಿ ಹೇಳಿದ್ದರು.