Advertisement

ಮಧ್ಯಾಹ್ನದ ಬಿಸಿಯೂಟ ಇನ್ನು ಪಿಎಂ-ಪೋಷಣ್‌

01:37 AM Sep 30, 2021 | Team Udayavani |

ಹೊಸದಿಲ್ಲಿ: ದೇಶದ 11.2 ಲಕ್ಷ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದಕ್ಕಾಗಿ ಪ್ರಧಾನಮಂತ್ರಿ ಪೋಷಣ್‌ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

Advertisement

ಯೋಜನೆ 5 ವರ್ಷಗಳ ಅವಧಿಯದ್ದಾಗಿದ್ದು, 1.31 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಬಿಸಿಯೂಟದ ಬದಲು ಪಿಎಂ -ಪೋಷಣ್‌ ಯೋಜನೆ ಜಾರಿಯಾಗಲಿದೆ.

ಸಚಿವ ಸಂಪುಟವು ಸರಕಾರಿ ಸ್ವಾಮ್ಯದ ರಫ್ತು ಸಾಲ ಖಾತರಿ ನಿಗಮ (ಇಸಿಜಿಸಿ)ಕ್ಕೆ 4,400 ಕೋ.ರೂ. ಬಂಡವಾಳ ಒದಗಿಸುವ ಮತ್ತು ಅದರ ಷೇರು ಮಾರಾಟಕ್ಕೂ ಅಂಗೀಕಾರ ನೀಡಿದೆ. ರಾಷ್ಟ್ರೀಯ ರಫ್ತು ವಿಮಾ ಖಾತೆ (ಎನ್‌ಇಐಎ) ಯೋಜನೆಯ ವಿಸ್ತರಣೆ ಮತ್ತು ಅದಕ್ಕೆ 5 ವರ್ಷಗಳ ಅವಧಿಗೆ 1,650 ಕೋ.ರೂ.ಗಳ ಸಹಾಯಾನುದಾನ ಬಿಡುಗಡೆಗೂ ಅಸ್ತು ಎಂದಿದೆ.

ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ

ಹೊಸತೇನು?
-ಬಾಲವಾಡಿ ಮಕ್ಕಳಿಗೂ ವಿಸ್ತರಣೆ
-ಹಬ್ಬಗಳ ಸಂದರ್ಭ ಮಕ್ಕಳಿಗೆ ವಿಶೇಷ ಭೋಜನ ಒದಗಿಸಲು ಸಮುದಾಯಕ್ಕೆ ಅವಕಾಶ
-ಶಾಲಾ ಕೈತೋಟದಲ್ಲಿ ಬೆಳೆದ ಪೌಷ್ಟಿಕಾಂಶ
ಯುಕ್ತ ಹಣ್ಣು-ತರಕಾರಿ ಬಳಕೆ
-ಸ್ಥಳೀಯ, ಸಾಂಪ್ರದಾಯಿಕ ಆಹಾರಕ್ಕೆ ಒತ್ತು ನೀಡಲು ಅಡುಗೆ ಸ್ಪರ್ಧೆ
-ರೈತ ಉತ್ಪನ್ನ ಸಂಘಗಳು, ಸ್ತ್ರೀಶಕ್ತಿ ಗುಂಪುಗಳ ಒಳಗೊಳ್ಳುವಿಕೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next