Advertisement

ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್‌ ಕಾರು ಅಪಘಾತ: ಪಾರು

12:06 PM Feb 07, 2018 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಅವರು ಇಂದು ಬೆಳಗ್ಗೆ ಕಾರು ಅಪಘತದಲ್ಲಿ ಗಾಯಗೊಂಡಿದ್ದು ಅವರನ್ನು ಚಿತ್ತೋರ್‌ಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಈ ಕಾರು ಅಪಘಾತದಲ್ಲಿ ವಸಂತಭಾಯಿ ಮೋದಿ ಎಂಬ ನಿಕಟ ಸಂಬಂಧಿಯೋರ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಮೋದಿ ಪತ್ನಿ ಜಶೋದಾಬೆನ್‌ ಅವರು ಕೋಟ ಸಮೀಪದ ಬಾರಾನ್‌ ಜಿಲ್ಲೆಯಲ್ಲಿನ ತಮ್ಮ ಬಂಧುಗಳನ್ನು ಭೇಟಿಯಾಗಿ ಗುಜರಾತ್‌ಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ.

ಪಾರ್‌ಸೋಲಿ ಪೊಲೀಸ್‌ ಠಾಣೆಯ ಎಸ್‌ಎಚ್‌ಓ ಶ್ಯಾಮ್‌ಸಿಂಗ್‌ ಅವರ ಪ್ರಕಾರ ಜಶೋದಾಬೆನ್‌ ಅವರಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ. ಅವರು ತಮ್ಮ ಬಂಧುಗಳೊಂದಿಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಕತುಂಡಾ ಎಂಬಲ್ಲಿಗೆ ಸಮೀಪ ಅಪಘಾತಕ್ಕೆ ಗುರಿಯಾಯಿತು.

ಜಶೋದಾಬೆನ್‌ ಅವರು ತಮ್ಮ ಸಹೋದರ ಅಶೋಕ್‌ ಮೋದಿ ಅವರೊಂದಿಗೆ ಮೆಹಸಾನಾ ಜಿಲ್ಲೆಯ ಉಂಜಾ ಪಟ್ಟಣದಲ್ಲಿ ವಾಸವಾಗಿದ್ದಾರೆ. ಆಕೆಗೆ ಮೆಹಸಾನಾ ಪೊಲೀಸ್‌ ಪಡೆಯಿಂದ ರಕ್ಷಣೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next