Advertisement

ಮತ್ತೆ ಅಗ್ರನಾಯಕರಾಗಿ ಹೊರಹೊಮ್ಮಿದ ಮೋದಿ

07:59 PM Nov 07, 2021 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ವಿಶ್ವ ಮಾನ್ಯ ನಾಯಕರ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ! ಅಮೆರಿಕದ “ಮಾರ್ನಿಂಗ್‌ ಕನ್ಸಲ್ಟ್’ ಎಂಬ ಸಂಸ್ಥೆ, ಇವರ ನಾಯಕತ್ವ ಹಾಗೂ ಆಡಳಿತ ವೈಖರಿಗೆ ಸಿಕ್ಕಿರುವ ಜಾಗತಿಕ ಮನ್ನಣೆಯನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಿದೆ.

Advertisement

13 ದೇಶಗಳ ಬಲಿಷ್ಠ ನಾಯಕರ ಬಗ್ಗೆ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಶೇ.70ರಷ್ಟು ಜನರು ಪ್ರಧಾನಿ ಮೋದಿಯವರನ್ನು ನಾಯಕರನ್ನಾಗಿ ಸ್ವೀಕರಿಸಿ ಅವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಇದೇ ಸಂಸ್ಥೆ ಕಳೆದ ವರ್ಷ ನಡೆಸಿದ್ದ ಸಮೀಕ್ಷೆಯಲ್ಲೂ ಮೋದಿ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದರು.

ಪ್ರಸಕ್ತ ವರ್ಷದ ಪಟ್ಟಿಯಲ್ಲಿ ಮೆಕ್ಸಿಕೋದ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯುಯೆಲ್‌ ಲೊಪೇಜ್‌ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಇಟಲಿಯ ಮರಿಯೊ ಡ್ರಾ , ನಾಲ್ಕನೇ ಸ್ಥಾನದಲ್ಲಿ ಜರ್ಮನಿಯ ಪ್ರಧಾನಿ ಆ್ಯಂಜೆಲಾ ಮಾರ್ಕೆಲ್‌, ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮೊರಿಸನ್‌ ಇದ್ದಾರೆ.

ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ

ಅಮೆರಿಕ ಅಧ್ಯಕ್ಷ ಜೊ ಬೈಡನ್‌ 6ನೇ ಸ್ಥಾನದಲ್ಲಿ, ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರಡೆಯು 7ನೇ ಸ್ಥಾನದಲ್ಲಿದ್ದಾರೆ. ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ 10ನೇ ಸ್ಥಾನದಲ್ಲಿದ್ದಾರೆ.

Advertisement

ಅಪಾರ ಜನಮನ್ನಣೆ ಗಳಿಸಿದ ನಾಯಕರು
ಸ್ಥಾನ ನಾಯಕರು ದೇಶ-ಹುದ್ದೆ ಸ್ವೀಕಾರ
1. ನರೇಂದ್ರ ಮೋದಿ ಭಾರತದ ಪ್ರಧಾನಿ ಶೇ. 70
2. ಲೋಪೇಜ್‌ ಒಬ್ರೆಟರ್‌ ಮೆಕ್ಸಿಕೋ ಅಧ್ಯಕ್ಷ ಶೇ. 66
3. ಮರಿಯೊ ಡ್ರಾ ಇಟಲಿ ಪ್ರಧಾನಿ ಶೇ. 58
4. ಏಂಜೆಲೊ ಮಾರ್ಕೆಲ್‌ ಜರ್ಮನಿ ಪ್ರಧಾನಿ ಶೇ. 54
5. ಸ್ಕಾಟ್‌ ಮೊರಿಸನ್‌ ಆಸ್ಟ್ರೇಲಿಯಾ ಪ್ರಧಾನಿ ಶೇ. 47
6. ಜೊ ಬೈಡನ್‌ ಅಮೆರಿಕ ಅಧ್ಯಕ್ಷ ಶೇ. 44
7. ಜಸ್ಟಿನ್‌ ಟ್ರಾಡೆಯು ಕೆನಡಾ ಪ್ರಧಾನಿ ಶೇ. 43
8. ಫ್ಯೂಮಿಯೋ ಕಿಶಿದಾ ಜಪಾನ್‌ ಪ್ರಧಾನಿ ಶೇ. 42
9. ಮೂನ್‌ ಜೆ-ಇನ್‌ ದಕ್ಷಿಣ ಕೊರಿಯಾ ಅಧ್ಯಕ್ಷ ಶೇ. 41
10. ಬೋರಿಸ್‌ ಜಾನ್ಸನ್‌ ಯು.ಕೆ. ಪ್ರಧಾನಿ ಶೇ. 40
11. ಪೆಡ್ರೊ ಸ್ಯಾಂಚೆಝ್ ಸ್ಪೇನ್‌ ಪ್ರಧಾನಿ ಶೇ. 37
12. ಇಮಾನ್ಯುಯೆಲ್‌ ಮಾಕ್ರನ್‌ ಫ್ರಾನ್ಸ್‌ ಅಧ್ಯಕ್ಷ ಶೇ. 36
13. ಜೈರ್‌ ಬೊಲ್ಸೊನಾರೊ ಬ್ರೆಜಿಲ್‌ ಅಧ್ಯಕ್ಷ ಶೇ. 35

Advertisement

Udayavani is now on Telegram. Click here to join our channel and stay updated with the latest news.

Next