Advertisement

ಆಸ್ಪತ್ರೆಗೆ ಭೇಟಿ ನೀಡಿ ಶೌರಿ ಆರೋಗ್ಯ ವಿಚಾರಿಸಿದ ಮೋದಿ

10:04 AM Dec 09, 2019 | Sriram |

ಪುಣೆ: ಅನಾರೋಗ್ಯದಿಂದ ಪುಣೆಯ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ (78) ಅವರನ್ನು ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

Advertisement

ಸಂಜೆ 6 ಗಂಟೆ ವೇಳೆಗೆ ರೂಬಿ ಹಾಲ್‌ ಕ್ಲಿನಿಕ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಸ್ವಲ್ಪ ಹೊತ್ತು ಶೌರಿಯವರ ಆರೋಗ್ಯದ ಬಗ್ಗೆ ವಿಚಾರಿಸಿ ವಾಪಸಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಡಿ.1ರಂದು ಲಾವಾಸಾದ ತಮ್ಮ ಬಂಗಲೆಯಿಂದ ವಾಕಿಂಗ್‌ ಹೊರಟಿದ್ದಾಗ ಆಯ ತಪ್ಪಿ ಬಿದ್ದಿದ್ದ ಶೌರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳಿಗೆ ಹಾನಿಯಾಗಿದ್ದು, ಆಂತರಿಕ ರಕ್ತಸ್ರಾವ ಕೂಡ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next