Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಯಕ್ತಿಕ ವೆಬ್ ಸೈಟ್ ನ ಟ್ವಿಟ್ಟರ್ ಖಾತೆ ಹ್ಯಾಕ್ !

12:45 PM Sep 03, 2020 | keerthan |

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ಸೈಟ್ ಗೆ ಜೋಡಣೆಯಾಗಿರುವ ಟ್ಟಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಗುರುವಾರ ಮುಂಜಾನೆ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು, ಸದ್ಯ ಸರಿಪಡಿಸಲಾಗಿದೆ.

Advertisement

ಈ ಖಾತೆಯಿಂದ ಹ್ಯಾಕರ್ ಗಳು ಬಿಟ್ ಕಾಯಿನ್ ದೇಣಿಗೆ ನೀಡುವಂತೆ ಕೋರಿ ಹಲವು ಟ್ವೀಟ್ ಗಳನ್ನು ಮಾಡಿದ್ದಾರೆ. ಅದಲ್ಲದೆ ಈ ಟ್ವಿಟ್ಟರ್ ಖಾತೆ ಜಾನ್ ವಿಕ್ ಎಂಬಾತನಿಂದ ಹ್ಯಾಕ್ ಮಾಡಲಾಗಿದೆ ಎಂದೂ ಟ್ವೀಟ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಈ ಟ್ವಿಟ್ಟರ್ ಖಾತೆ ಸುಮಾರು 2.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next