Advertisement

CM ಸಿದ್ದರಾಮಯ್ಯ ಎದುರು PM ಮೋದಿ ಹಾಸ್ಯ ಚಟಾಕಿ : ವಿಡಿಯೋ ನೋಡಿ

04:54 PM Jan 19, 2024 | Team Udayavani |

ಬೆಂಗಳೂರು: ನೂತನ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಲು ಅವಕಾಶ ಒದಗಿಸಿಕೊಟ್ಟಿತು.

Advertisement

ಪ್ರಧಾನಿ ಮೋದಿ ಅವರು ಭಾಷಣದ ವೇಳೆ ”ಭಾರತದಲ್ಲಿ ಅತೀ ದೊಡ್ಡ ಪ್ರತಿಭೆಗಳ ಸಾಗರವೇ ಇದೆ. ಭಾರತದಲ್ಲಿ ಸ್ಥಿರ ಸರಕಾರವಿದೆ.ಭಾರತದಲ್ಲಿ ಮೇಕ್ ಇನ್ ಇಂಡಿಯಾ… ಎನ್ನುತ್ತಿದ್ದಂತೆ.. ನೆರೆದಿದ್ದ ಸಭಿಕರು ‘ಮೋದಿ-ಮೋದಿ’ ಎಂದು ಘೋಷಣೆ ಕೂಗಲು ಆರಂಭಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ನಗುತ್ತಾ ಸಿಎಂ ಸಿದ್ದರಾಮಯ್ಯ ಅವರನ್ನು ಅವರನ್ನುತಿರುಗಿ ನೋಡಿ” ಮುಖ್ಯಮಂತ್ರಿ ಜಿ.. ಈ ರೀತಿ ಆಗುತ್ತಾ ಇರುತ್ತದೆ”(Mukhyamantri ji aisa hota rehta hai) ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಆಸೀನರಾಗಿದ್ದ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ನೋಡಿದರು.

ಸಭಾ ವೇದಿಕೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್, ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರ ಪಕ್ಕದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next