Advertisement

ಇಂದು (ನ.13) ಗುಜರಾತ್, ರಾಜಸ್ಥಾನದಲ್ಲಿ ಆಯುರ್ವೇದ ಕೇಂದ್ರ ಉದ್ಘಾಟನೆ

11:16 AM Nov 13, 2020 | Nagendra Trasi |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ನವೆಂಬರ್ 13, 2000) ಗುಜರಾತ್ ಮತ್ತು ರಾಜಸ್ಥಾನದಲ್ಲಿ ಭವಿಷ್ಯಕ್ಕೆ ಪೂರಕವಾಗಬಲ್ಲ ಆಯುರ್ವೇದ ಇನ್ಸ್ ಟ್ಯೂಷನ್ ಗಳನ್ನು ಉದ್ಘಾಟಿಸಲಿದ್ದಾರೆ.

Advertisement

ಗುಜರಾತ್ ನ ಜಾಮ್ ನಗರದಲ್ಲಿ ಇನ್ಸ್ ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದ(ಐಟಿಆರ್ ಎ) ಹಾಗೂ ರಾಜಸ್ಥಾನದ ಜೈಪುರದಲ್ಲಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಆಯುರ್ವೇದ(ಎನ್ ಐಎ) ಕೇಂದ್ರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

21ನೇ ಶತಮಾನದಲ್ಲಿ ಆಯುರ್ವೇದ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ನಾಯಕತ್ವ ಗುರುತಿಸಿಕೊಳ್ಳಲು ಈ ಕೇಂದ್ರಗಳು ನೆರವಾಗಬಲ್ಲದು ಎಂದು ನಿರೀಕ್ಷಿಸಲಾಗಿದೆ.

2016ರಿಂದ ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನವನ್ನಾಗಿ ಆಚರಿಸಲು ಆರಂಭಿಸಿದ್ದು, 2020ರಲ್ಲಿ ನವೆಂಬರ್ 13ರಂದು ಆಯುರ್ವೇದ ದಿನ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎರಡು ಆಯುರ್ವೇದ ಸಂಸ್ಥೆಗಳನ್ನು ಲೋಕಾರ್ಪಣೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next