Advertisement
ಜಾಲಿಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9.30 ಕ್ಕೆ ಬಂದಿಳಿದ ಮೋದಿ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸದ್ಯ 75 ಕೋಟಿ ರೂ. ವೆಚ್ಚದಲ್ಲಿ ಕೇದಾರನಾಥ ದೇಗುಲದ ಸೌಂದರ್ಯ ವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅದರ ಪರಿವೀಕ್ಷಣೆ ಮಾಡಿದರು. ಇಲ್ಲಿ ನಡೆಯುತ್ತಿರುವ ಹಲವು ಪುನಶ್ಚೇತನ ಯೋಜನೆಗಳನ್ನು ಪ್ರಧಾನಿ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರಧಾನಿಯಾದ ಅನಂತರ ಈಗಾ ಗಲೇ 4 ಬಾರಿ ಇಲ್ಲಿಗೆ ಭೇಟ ನೀಡಿ ದ್ದಾರೆ.
ಕೇದಾರನಾಥ ಪುನಶ್ಚೇತನ ಕಾಮಗಾರಿ ವೇಳೆ ದೇಗುಲದಿಂದ ಸುಮಾರು 2 ಕಿ.ಮೀ. ದೂರದಲ್ಲಿ 2 ಧ್ಯಾನ ಕುಟೀರ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ತೆರ ಳುವ ಹಾದಿ ಕಡಿದಾಗಿದೆ. ಇಲ್ಲಿ ನಡೆದು ಕೊಂಡು ಹೋಗಲು ಮಾತ್ರವೇ ಅವಕಾಶವಿದೆ. ಕೇದಾರನಾಥ ದೇಗು ಲಕ್ಕೆ ಭೇಟಿ ನೀಡಿ, ಪೂಜೆ ಪುನಸ್ಕಾರ, ಅಭಿವೃದ್ಧಿ ಕಾರ್ಯ ಪರಿಶೀಲನೆ ನಡೆಸಿದ ಮೋದಿ ಅಅನಂತರ ಅಲ್ಲಿಂದ ಧ್ಯಾನ ಕುಟೀರಕ್ಕೆ ತೆರಳಿದ್ದಾರೆ. ಎರಡು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ದ್ದಾರೆ. ಇಲ್ಲಿ ಇವರು ಧ್ಯಾನ ಆರಂಭಿ ಸಿದ್ದು, ರವಿವಾರ ಬೆಳಗ್ಗೆಯವರೆಗೂ ಧ್ಯಾನಮಗ್ನರಾಗಿರಲಿದ್ದಾರೆ.