Advertisement

2018ರೊಳಗೆ ದೇಶದಲ್ಲಿ ವಿದ್ಯುತ್‌ ಇಲ್ಲದ ಗ್ರಾಮವೇ ಇರದು: ಮೋದಿ

11:44 AM May 23, 2017 | udayavani editorial |

ಗಾಂಧಿನಗರ : ಎರಡು ದಿನಗಳ ಗುಜರಾತ್‌ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 2018ರೊಳಗೆ ವಿದ್ಯುತ್‌ ಇಲ್ಲದ ಒಂದೇ ಒಂದು ಗ್ರಾಮ ಕೂಡ ಭಾರತದಲ್ಲಿ ಇರದು ಎಂದು ಹೇಳಿದ್ದಾರೆ. 

Advertisement

ಇಲ್ಲಿನ ಆಫ್ರಿಕನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಅವರು, 2014ರಲ್ಲಿ ನಾನು ದೇಶದ ಪ್ರಧಾನಿಯಾದಾಗ ಆಫ್ರಿಕವನ್ನು ನಾನು ನನ್ನ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡಿದ್ದೆ ಎಂದು ಹೇಳಿದರು. 

ಕಳೆದ ಕೆಲವು ದಶಕಗಳಿಂದೀಚೆಗೆ ಭಾರತ – ಆಫ್ರಿಕ ನಡುವಿನ ಬಾಂಧವ್ಯ ಬಲಿಷ್ಠವಾಗಿದೆ; ಭಾರತದ ವಿದೇಶ ಹಾಗೂ ಆರ್ಥಿಕ ನೀತಿಗಳಲ್ಲಿ ನಾವು ಆಫ್ರಿಕಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು. 

ಆಫ್ರಿಕದೊಂದಿಗಿನ ಭಾರತದ ಭಾಗೀದಾರಿಕೆಯು ಸಹಕಾರಿ ತತ್ವದ ತಳಹದಿಯನ್ನು ಹೊಂದಿದೆ. ಅಂತೆಯೇ ಆಫ್ರಿಕನ್‌ ದೇಶಗಳ ಆವಶ್ಯಕತೆಗಳಿಗೆ ತಕ್ಕಂತೆ ನಮ್ಮ ಸ್ಪಂದನೆ ಇದೆ. ಆಫ್ರಿಕನ್‌ ದೇಶಗಳೊಂದಿಗೆ ಶೈಕ್ಷಣಿಕ ಹಾಗೂ ತಾಂತ್ರಿಕ ಬಾಂಧವ್ಯಗಳನ್ನು ಹೊಂದಿರುವುದಕ್ಕೆ ಭಾರತಕ್ಕೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next